Best Viewed in Mozilla Firefox, Google Chrome

ಎಲೆಕವಚದ ಮಚ್ಚೆ ರೋಗದ ನಿಯಂತ್ರಣ - Control Measures of Sheath blight

ತಳಿಯ ನಿರೋಧಕತೆ: ಹಲವು ರೋಗ ನಿರೋಧಕ ಪರೀಕ್ಷೆಗಳನ್ನು ನಡೆಸುವುದರ ಮೂಲಕ ಎಲೆ ಕವಚದ ಬೆಂಕಿ ರೋಗಕ್ಕೆ ನಿರೋಧಕ ಶಕ್ತಿ ಇರುವ ತಳಿಗಳನ್ನು ಗುರುತಿಸಲಾಗಿದೆ. ಆದರೂ ಈ ವರೆಗೆ ಯಾವುದೇ ತಳಿ ಸಂಪೂರ್ಣ ನಿರೋಧಕ ಶಕ್ತಿಯನ್ನು ತೋರಿಸಿಲ್ಲ.

ಸಾಂಸ್ಕೃತಿಕ ಆಚರಣೆಗಳು: ಸಾರಜನಕಯುಕ್ತ ಗೊಬ್ಬರವನ್ನು ಮಿತವಾಗಿ ಬಳಸುವುದರ ಮೂಲಕ ಎಲೆಕವಚದ ಬೆಂಕಿ ರೋಗವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದಾಗಿದೆ (ತೆಂಡೆಹೊಡೆಯುವ ಸಮಯದಲ್ಲಿ ಸಾರಜನಕಯುಕ್ತ ಗೊಬ್ಬರವನ್ನು ನೀಡದಿರಿ).

ಜೈವಿಕ ನಿಯಂತ್ರಣ: ಟ್ರೈಕೋಡರ್ಮ ವಿರಿಡೇ ಮತ್ತು ಸುಡೋಮೋನಾಸ್ ಫ್ಲೂರಸೆನ್ಸ್ ನಂತಹ ಜೈವಿಕ ನಿಯಂತ್ರಣಾ ಮಧ್ಯವರ್ತಿಗಳು, ಭತ್ತದ ಎಲೆಕವಚದ ಬೆಂಕಿ ರೋಗವನ್ನು ತರುವ ರೈಜ಼ೋಕ್ಟೋನಿಯಾ ಸೊಲಾನಿ ಯ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ. ಇವುಗಳು ಹೆಚ್ಚಗಿರುವ ಪ್ರದೇಶಗಳಲ್ಲಿ ಸಾವಯವ ಗೊಬ್ಬರದ (ಹಟ್ಟಿ ಗೊಬ್ಬರ, ಒತ್ತು ಇಟ್ಟಿಗೆ, ಹಾಗೂ ಎರೆಗೊಬ್ಬರ, ಇತ್ಯಾದಿ) ಜೊತೆಗೆ ಈ ಜೈವಿಕ ರೋಗ ನಿಯಂತ್ರಕಗಳನ್ನು ಮಣ

ಎಲೆಕವಚದ ಮಚ್ಚೆ ರೋಗದ ಲಕ್ಷಣಗಳು - Symptoms of Sheath blight

ಭತ್ತದಲ್ಲಿ ಸಸ್ಯದ ಹಸಿರು ಬೆಳವಣಿಗೆ ಸಂಪೂರ್ಣವಾದಾಗ ಎಲೆಕವಚದ ಮಚ್ಚೆ ರೋಗವು ಕಾಣಿಸಿಕೊಳ್ಳುವುದು: ಸಂಪೂರ್ಣ ತಂಡೆಗಳು ಬೆಳೆದ ಹಂತದಲ್ಲಿ, ಅಥವಾ ಕಾಂಡದ ಎತ್ತರದ ಬೆಳವಣಿಗೆ ಸಂಪೂರ್ಣವಾದಾಗ. ರೋಗದಿಂದಾಗಿ ಎಲೆಗಳ ಮೇಲೆ ಹಾಗೂ ಎಲೆಕವಚದ ಮೇಲೆ ಗಾಯಗಳು ಹುಟ್ಟಿಕೊಳ್ಳುತ್ತವೆ. ಸಾಮಾನ್ಯವಾಗಿ ಗಾಯಗಳು, ದೀರ್ಘವೃತ್ತಾಕಾರದಿಂದ ಹಿಡಿದು, ಅಸಮವಾಗಿರುವ, ಹಸಿರು-ಬೂದು ಬಣ್ಣದಿಂದ ಕೂಡಿದ, 1-3 ಸೆಂ.ಮೀ.ಗಿಂತಲೂ ಉದ್ದದ, (ಒಯು,1985), ಗಾಯಗಳು ಮೊದಲು ಕಾಣಿಸಿಕೊಳ್ಳುತ್ತವೆ. ಗಾಯದ ಕೇಂದ್ರ ಭಾಗ ಬೂದು-ಬಿಳಿ ಬಣ್ಣಕ್ಕೆ ತಿರುಗಿ, ಕಂದು ಬಣ್ಣದ ಅಂಚನ್ನು ಪಡೆಯುತ್ತದೆ. ಸುತ್ತಲಿನ ಪರಿಸರದ ಪರಿಸ್ಥಿತಿ ಹಾಗೂ ಗಾಯದ ವಯಸ್ಸನ್ನು ಹೊಂದಿಕೊಂಡು ಅದರ (ಗಾಯದ) ಗಾತ್ರ ಮತ್ತು ಬಣ್ಣದಲ್ಲಿ ವ್ಯತ್ಯಾಸವಾಗುತ್ತದೆ. ಗಾಯಗಳು ಒಗ್ಗೂಡುವುದರಿಂದ ಕೆಲವೊಮ್ಮೆ ಎಲೆಯು ಭಾಗಶಃ ಅಥವಾ ಸಂಪೂರ್ಣವಾಗಿ ಈ ರೋಗಕ್ಕೆ ತುತ್ತಾಗುತ್ತದೆ. ಸ್ಕ್ಲಿರೋಶಿಯಾಗಳು ಗಾಯದ ಬಳಿ, ಅಥವಾ ಗಾಯದ ಮೇಲೆ, ಕಾಂಡದಲ್ಲಿ, ಅಥವಾ ಬ

27
Aug

ಎಲೆಕವಚದ ಮಚ್ಚೆ ರೋಗ - Sheath Blight

ಎಲೆಕವಚದ ಮಚ್ಚೆ ರೋಗ - Sheath Blight

ಭತ್ತದಲ್ಲಿ ಎಲೆಕವಚದ ಮಚ್ಚೆ ರೋಗ ಆರ್ಥಿಕ ದೃಷ್ಠಿಯಲ್ಲಿ ಬಹಳ ಮಹತ್ವ ಪಡೆದಿದೆ. ಅಲ್ಲದೆ, ಕಳೆದ ಇಪ್ಪತ್ತು ವರ್ಷಗಳಿಂದ ಇಳುವರಿ ಕಡಿಮೆಯಾಗಿರುವುದಕ್ಕೆ ತನ್ನ ಕೊಡುಗೆಯನ್ನು ನೀಡಿದೆ. ಈ ರೋಗವು ಭತ್ತ ಬೆಳೆಯುವ ಎಲ್ಲಾ ರಾಜ್ಯಗಳಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ.

ಎಲೆಕವಚದ ಮಚ್ಚೆ ರೋಗದಿಂದ ಪ್ರಭಾವಿತವಾಗುವ ಸಸ್ಯದ ವಿವಿಧ ಭಾಗಗಳು - Affected Plant Stages by Sheath blight

ಹೂಬಿಡುವ ಹಂತ, ಕಾಯಿ ಕಚ್ಚುವ ಹಂತ, ಕೊಯಿಲಿಗೆ ಮೊದಲು, ತೆನೆ ಕಾಣಿಸಿಕೊಳ್ಳುವ ಮೊದಲು, ಮೊಳಕೆಯ ಸಸಿಯ ಹಂತ, ಹಸಿರು ಎಲೆಗಳು ಹುಟ್ಟುವ ಹಂತ

ಭತ್ತದ ಬೆಂಕಿ ರೋಗದ ನಿಯಂತ್ರಣ ಉಪಾಯಗಳು - Control Measures of Rice Blast disease

ಆತಿಥೇಯ ಸಸ್ಯ ನಿರೋಧಕತೆ: ರೋಗ ನಿರೋಧಕತೆಯನ್ನು ಹೊಂದಿರುವ ಸಸ್ಯಗಳನ್ನು ನೆಡುವುದು ಅತ್ಯಂತ ಸರಳ, ಕಡಿಮೆ ವೆಚ್ಚದ ಹಾಗೂ ಸುರಕ್ಷಿತ ರೋಗ ನಿಯಂತ್ರಣದ ವಿಧಾನವಾಗಿದೆ. ರಾಸಿ, ಇ.ಐ.ಟಿ.-1791, ಬಿ.ಆರ್.-2655 ಇವುಗಳನ್ನು ದಕ್ಷಿಣದ ಒಣ ಪ್ರದೇಶಗಳಿಗೆ ಸೂಕ್ತವಾದ ಬೆಂಕಿ ರೋಗ ನಿರೋಧಕ ತಳಿಗಳೆಂದು ಶಿಫಾರಸು ಮಾಡಲಾಗಿದೆ. ರೋಗ ಹರಡುವ ಗತಿಯನ್ನು ನಿಧಾನ ಮಾಡಲು ಮಿಶ್ರ ತಳಿಗಳನ್ನೂ ಉಪಯೋಗಿಸಬಹುದಾಗಿದೆ.

ಸಾಂಸ್ಕೃತಿಕ ಪದ್ಧತಿಗಳು: ಭತ್ತದ ಬೆಳೆಯಲ್ಲಿ ಹಾಸುಹೊಕ್ಕಾಗಿರುವ ಸಾಂಸ್ಕೃತಿಕ ಪದ್ಧತಿಗಳಾದ ನಾಟಿ ಮಾಡುವ ಸಮಯ, ಕಟಾವು ಮಾಡುವ ಸಮಯ, ಗೊಬ್ಬರದ ಬಳಕೆ. ಉಳುಮೆ ಮಾಡುವ ಕಾಲ, ಕಳೆ ನಿಯಂತ್ರಣ, ಹಾಗೂ ಬೆಳೆ ಬೆಳೆಸುವ ವಿಧಾನ- ಇವುಗಳು ರೋಗ ವೃದ್ಧಿಯಾಗುವುದರ ಮೇಲೆ ಪರಿಣಾಮ ಬೀರುತ್ತವೆ. ಸಾರಜನಕವನ್ನು ಮಿತವಾಗಿ ಬಳಸುವುದರಿಂದ ಬೇಂಕಿ ರೋಗವನ್ನು ಆದಷ್ಟು ಮಟ್ಟಿಗೆ ಕಡಿಮೆ ಮಾಡಬಹುದು. ರೋಗದ ಚಕ್ರವು ನಿರಂತರವಾಗಿ ಮುಂದುವರಿಯದಂತೆ ನೋಡಿಕೊಳ್ಳುವಲ್ಲಿ ಬೆಳೆಯ ಆವರ್ತ

ಭತ್ತದ ಬೆಂಕಿ ರೋಗದಲ್ಲಿ ಹಾನಿಯಾಗುವ ವಿಧಾನ - Mechanism of damage of Rice Blast disease

ರೋಗಾಣುವಿನ ಪ್ರವೇಶದ ಆರು ದಿನಗಳ ನಂತರ ಗಾಯದಲ್ಲಿ ಕೊನಿಡಿಯಾಗಳು ಕಾಣಿಕೊಳ್ಳುತ್ತವೆ. ವಾತಾವರಣದ ತೇವಾಂಶ ಹೆಚ್ಚಾದಂತೆ ಬೀಜಕಣಗಳ ಉತ್ಪಾದನೆಯಲ್ಲೂ ಹೆಚ್ಚಳವಾಗುತ್ತದೆ. ಬೀಜಕಣಗಳು ಹೆಚ್ಚಾಗಿ ರಾತ್ರಿವೇಳೆಯಲ್ಲಿ ಉತ್ಪತ್ತಿಯಾಗುವುದಲ್ಲದೆ, ರಾತ್ರಿಯ ವೇಳೆಯಲ್ಲೇ ಬಿಡುಗಡೆಗೊಳ್ಳುತ್ತವೆ. ಬೀಜಾಂಕುರವಾದ ನಂತರ ಸೋಂಕು ತಗಲುತ್ತದೆ. ಅಪ್ರೆಸ್ಸೋರಿಯಾ ದಿಂದ ಸೋಂಕಿನ ಕೊಳವೆಗಳು ಹುಟ್ಟಿಕೊಂಡು ನಂತರ ಅವು ಎಲೆಯ ಕ್ಯೂಟಿಕಲ್ ಮತ್ತು ಎಪಿಡರ್ಮಿಸ್ ಪದರದ ಮೂಲಕ ಪ್ರವೇಶಿಸುತ್ತದೆ. ಕೋಶವನ್ನು ಪ್ರವೇಶಿಸಿದ ನಂತರ ಸೋಂಕಿನ ಕೊಳವೆಯು ದುಂಡಗಿನ ಗುಳ್ಳೆಯನ್ನು ರಚಿಸುತ್ತದೆ. ಇದರಿಂದ ಹೈಫೆಗಳು ಹುಟ್ಟಿಕೊಳ್ಳುತ್ತವೆ. ಕೋಶದೊಳಗೆ ಹೈಫೆಗಳು ಸ್ವಚ್ಛಂದವಾಗಿ ಬೆಳೆಯುತ್ತವೆ.

ಯಾವ ಹಂತದಲ್ಲಿ ಭತ್ತದ ಬೆಂಕಿ ರೋಗ ಮಹತ್ತರ ಪಾತ್ರ ವಹಿಸುತ್ತದೆ - When Rice Blast disease damage is important

ಭತ್ತದ ಬೆಂಕಿ ರೋಗವು ಸಸ್ಯದ ಬೆಳವಣಿಗೆಯ ಯಾವುದೇ ಹಂತದಲ್ಲಿ ಸೋಂಕುಂಟು ಮಾಡಬಹು

27
Aug

ಕೋನೋ ಕಳೆ ಕೀಳುವ ಸಲಕರಣೆ - Cono Weeder

ಕೋನೋ ಕಳೆ ಕೀಳುವ ಸಲಕರಣೆ - Cono Weeder

ವಿಧ : ದ್ವಿತೀಯ (ಅನುಷಂಗಿಕ) ಉಳುಮೆ ಪರಿಕರಗಳು/ ಸಾಧನಗಳು

ಉಪಯೋಗ: ಎಸ್ ಆರ್ ಐ (ಸ್ರೀ ) ವಿಧಾನದ ಭತ್ತದ ಬೆಳೆಯಲ್ಲಿ ಅಂತರ್ ಬೆಳೆ ಮಾಡುವಲ್ಲಿ ಬಳಸಬಹುದಾದ ಸಾಧನ.

ಬೆಲೆ: ರೂ. 1,000

ಬಗ್ಗಡಮಾಡುವ ವಿದ್ಯುಚ್ಚಾಲಿತ ಉಳುಮೆ ಯಂತ್ರ - Power tiller with Puddler

ವಿಧ : ದ್ವಿತೀಯ (ಅನುಷಂಗಿಕ) ಉಳುಮೆ ಪರಿಕರಗಳು/ ಸಾಧನಗಳು

ಉಪಯೋಗ: ಗದ್ದೆಗಳನ್ನು ಬಗ್ಗಡ ಮಾಡಲು ಬಳಕಸಲಾಗುತ್ತದೆ.

ಬೆಲೆ: ರೂ. 1,35,000

ಭತ್ತದ ಜೋಡು ಕಟಾವು ಯಂತ್ರ 1- Paddy Combined Harvester 1

ವಿಧ: ಕೃಷಿ ಯಂತ್ರ

ಉಪಯೋಗ: ಭತ್ತದ ಬೆಳೆಯ ಕೊಯಿಲು ಮತ್ತು ಒಕ್ಕಣೆ ಮಾಡುವಲ್ಲಿ ಬಳಸಲಾಗುತ್ತದೆ.

ಬೆಲೆ: ರೂ. 9, 25,000

ಚೀನಾ ಮಾದರಿಯ ನಾಟಿಮಾಡುವ ಯಂತ್ರ - Mechanical paddy Transplanter (Chinese design)

ವಿಧ : ದ್ವಿತೀಯ (ಅನುಷಂಗಿಕ) ಉಳುಮೆ ಪರಿಕರಗಳು/ ಸಾಧನಗಳು

ಉಪಯೋಗ: ಭತ್ತದ ಸಸಿಗಳನ್ನು ನಾಟಿಮಾಡಲು ಬಳಾಲಾಗುತ್ತದೆ.

ಬೆಲೆ: ರೂ. 1, 70,000

27
Aug

ಡ್ರಮ್ ಬಿತ್ತನೆ ಯಂತ್ರ - Drum seeder

ಡ್ರಮ್ ಬಿತ್ತನೆ ಯಂತ್ರ - Drum seeder

ವಿಧ : ದ್ವಿತೀಯ (ಅನುಷಂಗಿಕ) ಉಳುಮೆ ಪರಿಕರಗಳು/ ಸಾಧನಗಳು

ಉಪಯೋಗ: ಭತ್ತದ ನೇರ ಬಿತ್ತನೆ ವಿಧಾನದಲ್ಲಿ ಮುಂಚಿತವಾಗಿಯೇ ಮೊಳಕೆಯೊಡೆದಿರುವ ಬೀಜಗಳನ್ನು ಬಿತ್ತನೆ ಮಾಡಲು ಬಳಸಲಾಗುತ್ತದೆ.

ಬೆಲೆ: ರೂ. 2500- 2800

Copy rights | Disclaimer | RKMP Policies