Best Viewed in Mozilla Firefox, Google Chrome

ಡ್ರಮ್ ಸೀಡರ್ ಬಳಸಿ ಬಿತ್ತನೆ ಮಾಡುವುದರಲ್ಲಿನ ಅನುಕೂಲಗಳು - Advantages of direct seeding by using drum seeder

1. ಸಕಾಲದಲ್ಲಿ ಬಿತ್ತನೆ

2. ಕೃಷಿ ವೆಚ್ಚ ಕಡಿಮೆ

3. ನಾಟಿ ಮಾಡಿದ ಭತ್ತಕ್ಕಿಂತ 8-10 ದಿನಗಳು ಮೊದಲೆ ಕಟಾವಿಗೆ ಬರುವುದು

4. ಸುಲಭ ಮತ್ತು ಪರಿಣಾಮಕಾರಿ ವಿಧಾನ

02
Sep

Top dressing and Water Management

ತುದಿ ಚಿವುಟುವುದು - Top dressing

1. ಉಳಿದ ಸಾರಜನಕ ವನ್ನು ಸಮ ಭಾಗ ಮಾಡಿ ಎರಡು ಸಲ ಕೊಡಬೇಕು. ಒಂದು ಸಲ 25-30 DAS ಮತ್ತು ಎರಡನೆಯ ಸಲ 40-50 DAS. ಅಗತ್ಯ ಬಿದ್ದ ಸಸ್ಯ ಸಂರಕ್ಷಣಾ ಕ್ರಮ ತೆಗೆದುಕೊಳ್ಳ ಬೇಕು

ಜಲ ನಿರ್ವಹಣೆ - Water Management

1. ಡ್ರಮ್‌ ಭತ್ತ ಬಿತ್ತನೆ ವಿಧಾನದಲ್ಲಿ ನೀರಿನ ನಿರ್ವಹಣೆ ಅತಿ ಮುಖ್ಯ.

2 ಮಡಿಯಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಮತ್ತು ಬಿತ್ತಿದ 2 ವಾರದ ವರೆಗ ಮಣ್ಣು ಒಣಗದಂತೆ (ಶುಷ್ಕವಾಗದಂತ) ನೋಡಿಕೊಳ್ಳಬೇಕು.

3. ನಂತರ, ಕಟಾವು ಮಾಡುವವರೆಗೆ, 5 ಸೆ.ಮಿ ನೀರಿನ ಮಟ್ಟವನ್ನು ಕಾಪಾಡಬೇಕು. ಮತ್ತು ಕೊಯಿಲಿಗೆ 10 ದಿನ ಮುಂಚಿತವಾಗಿ ನೀರು ಹೊರಗೆ ಬಿಡಬೇಕು

ಸಸ್ಯನಾಶಕಗಳ ಅಪ್ಲಿಕೇಶನ್ - Application of Herbicides

1ಪ್ರೆಟಿಲಕ್ಲೋರ್ ಮತ್ತು ಸೇಫನರ್ (ಸೋಫಿಟ್ 30% ಇ.ಸಿ.) ಅನ್ನು ಪ್ರತಿ ಹೆಕ್ಟೇರಿಗೆ 1 ಲೀಟರಿನಂತೆ ಟೇ liter/ha 75 ಕಿ.ಗ್ರಾಂ ಮರಳಿನ ಜೊತೆ ಮಿಶ್ರ ಮಾಡಿ ಬಿತ್ತನೆಯಾದ 3 ರಿಂದ 5 ದಿನಗಳಲ್ಲಿ ಬಳಸುವುದಿಂದ ಪರಿಣಾಮಕಾರಿಯಾಗಿ ಕಳೆಯ ನಿಯಂತ್ರಣ ಮಾಡಬಹುದು.

2. 45 ದಿನಗಳ ನಂತರ ಮತ್ತೆ ಕೋನೋ ರೋಟರಿ ಕಳೆಕೀಳುವ ಯಂತ್ರವನ್ನು ಸಾಲುಗಳ ನಡುವೆ ಹಾಯಿಸುವುದರ ಮೂಲಕ ಕಳೆಯನ್ನು ಸಂಪೂರ್ಣವಾಗಿ ನ್ನಿಯಂತ್ರಣ ಮಾಡಬಹುದು.

ಕಳೆ ತೆಗೆಯುವುದು ಮತ್ತು ಕುಡಿ ಚಿವುಟುವುದು - Weeding and top dressing

1. ನಾಟಿ ಮಾಡಿದ ಭತ್ತದಂತಲ್ಲದೆ ಬಿತ್ತನೆ ಮಾಡಿರುವ ಭತ್ತದಲ್ಲಿ ಗದ್ದೆಯಲ್ಲಿ ಕೆಲವು ಕಾಲ ನೀರು ನಿಲ್ಲ್ಲದಿರುವ ಕಾರಣ ಕಳೆಯು ಹೆಚ್ಚಾಗಿ ಬೆಳೆಯುತ್ತದೆ.

2. ಈ ಸಮಸ್ಯೆಯನ್ನು ಎದುರಿಸಲು ಗದ್ದೆಯಲ್ಲಿ ಎರಡು ಸಲ ಕಳೆ ಕೀಳಬೇಕು; ಕೋನೋ ರೋಟರೀ ಕಳೆಕೀಳುವ ಯಂತ್ರವನ್ನು ಸಾಲುಗಳ ನಡುವೆ ಚಲಿಸುವ ಹಾದುಹೋಗುವಂತೆ ಮಾಡುವ ಮೂಲಕ ಮೊದಲ ಇಪ್ಪತ್ತು ದಿನಗಳ ನಂತರ ಮತ್ತು ಎರಡನೆಯ ಸಲ ನಲವತ್ತು ದಿನಗಳ ನಂತರ ಕಳೆ ತೆಗೆಯಬೇಕು. ಇದು ಕಳೆ ಗಿಡಗಳನ್ನು ಮಣ್ಣಿಗೆ ಸೇರಿಸುವುದಲ್ಲದೆ ಮಣ್ಣು ಸಡಿಲವಾಗಿರುವಂತೆ ನೋಡಿಕೊಳ್ಳುತ್ತದೆ. ಸಾಲಿನೊಳಗಿನ ಕಳೆಯನ್ನು ಕೈಗಳಿಂದ ಕೀಳಬೇಕಾಗುತ್ತದೆ.

02
Sep

ಬಿತ್ತನೆ - Sowing

ಬಿತ್ತನೆ - Sowing

1. ಬಿತ್ತನೆಯ ಬೀಜಗಳನ್ನು (62.5ಕೆಜಿ/ಹೆ), ನೀರಿನಲ್ಲಿ 24 ತಾಸು ನೆನಸಿ, ನಂತರ ಬಸಿಹಾಕಿರಿ ನಂತರ ಕಾರ್ಬೆಂಡಿಜಿನ್‌( 4ಗ್ರಾಂ/ ಕೆಜಿ ಬೀಜಕ್ಕೆ ) ನಿಂದ ಬೀಜೋಪಚಾರ ಮಾಡುವರು.( Carbendazim) . ಅದನ್ನು ಒದ್ದೆಯಾದ ಗೋಣಿ ಚೀಲದಲ್ಲಿ ತುಂಬಿ ಬೆಚ್ಚನೆಯ ಜಾಗದಲ್ಲಿ ತೇವವನ್ನು ಉಳಿಸಿಕೊಳ್ಳುವಂತೆ 24-36 ಗಂಟೆಗಳ ಕಾಲ ಇಡುವರು.

2. ಆ ಸಮಯದ ನಂತರ, ಚೀಲದಿಂದ ಬೀಜಗಳನ್ನು ತೆಗೆದು ನಾಲಕ್ಕು ಡ್ರಮ್ಮುಗಳಲ್ಲಿ ಸಮನಾಗಿ ತುಂಬಿ ಮುಚ್ಚಳವನ್ನು ಭದ್ರವಾಗಿ ಮುಚ್ಚಲಾಗುವುದು..

3.ಈಗ ಬಿತ್ತನೆ ಡ್ರಮ್ಮ ಕೆಲಸಕ್ಕೆ ಸನ್ನದ್ಧವಾಗಿದೆ. ಬಿತ್ತನೆ ಡ್ರಮ್ಮ ಅನ್ನು ಹಿಮ್ಮುಖವಾಗಿ ಸರಳ ರೇಖೆಯಲ್ಲಿ ಎಳೆಯ ಬೇಕು. ಈ ಕೆಲಸವನ್ನು ಗದ್ದೆಯ ಒಂದು ಅಂಚಿನಿಂದ ಆರಂಭಿಸಬೇಕು. ಅದನ್ನು ಹೊಲದ ಒಂದು ಅಂಚಿನಿಂದ ಆರಂಭಿಸಿ ಚಾಲಕ ಹಿಂದಕ್ಕೂ ಮುಂದಕ್ಕೂ ಚಲಿಸಬಹುದು.

4. ಮುಂದೆ ಚಲಿಸುವಾಗ ಡ್ರಮ್ ತಿರುಗುವುದರಿಂದ ಬೀಜಗಳು ಪ್ರತಿ ಸಾಲಿನೊಳಗೆ ಬೀಳುತ್ತವೆ ಹಾಗೂ ಒಂದು ಬಾರಿಗೆ ಎಂಟು ಸಾಲಿನಲ್ಲಿ ಬಿತ್ತನೆಯಾಗತ್ತದೆ. ಒಬ್ಬ ವ್ಯಕ್ತಿ ಎಂಟು ಘಂಟೆಯ ಅವಧಯಲ

02
Sep

ಭೂಮಿಯ ತಯಾರಿ - Land preparation

ಭೂಮಿಯ ತಯಾರಿ - Land preparation

1. ಡ್ರಮ್‌ ಬಿತ್ತನೆಯಲ್ಲಿ ಭೂಮಿಯ ತಯಾರಿಗೆ ಹೆಚ್ಚಿನ ಕಾಳಜಿ ಕೊಡಬೇಕು. ಸರಿಯಾಗಿ ತಯಾರಿಸಿರದ ಭೂಮಿಯಲ್ಲಿ ಬಿತ್ತನೆ ಒಂದೇ ಸಮನಾಗಿರುವುದಿಲ್ಲ.

2. ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು. ಅದರಿಂದ ಮಣ್ಣು ಪುಡಿಯಾಗಿರಬೇಕು. ಇದಾದ ನಂತರ ಎರಡು ಮೂರು ಬಾರಿ ಕೆಸರ ಗದ್ದೆ ಮಾಡಬೇಕು.

3. ಒಂದು ಹೆಕ್ಟೇರಿಗೆ ಹತ್ತು ಟನ್‌ ಕೊಟ್ಟಗೆ ಗೊಬ್ಬರ ಅಥವಾ 05 ಟನ್‌ ಹಸಿರೆಲೆ ಬಿತ್ತನೆಗೆ ಮೂರು ವಾರ ಮೊದಲೆ ಗೊಬ್ಬರ ಭೂಮಿಗೆ ಹಾಕಬೇಕು.

4.ಶಿಫಾರ್ಸು ಮಾಡಿದ ಸಾರಜನಕದ 50% ರಂಜಕ ಮತ್ತು ಪೊಟಾಷ್‌ ಅನ್ನು ಪೂರ್ತಿಯಾಗಿ ಡ್ರಮ್‌ ಬಿತ್ತನೆಯ ಮೊದಲೆ ಹಾಕಬೇಕು.

5. ಒಂದು ಎಕರೆಗೆ ಮುಂಗಾರು ಬೆಳೆಗೆ 100:50:50 ಗೊಬ್ಬರವನ್ನು ಹಾಕಬೇಕು ಮತ್ತು ಭೇಸಿಗೆ ಬೆಳೆಗೆ 125: 62.5: 62.5 ಕೆಜಿ ಹಾಕ ಬೇಕು

ಡ್ರಮ್‌ ಬಿತ್ತನೆಯ ಮೂಲಕ ನೇರವಾಗಿ ಬಿತ್ತುವುದು- Direct Seeding by Drum Seeder

1. ಡ್ರಮ್‌ ಬಿತ್ತನೆ ಮಾಡಲು ಬಳಸುವ ಉಪಕರಣ. ಅಲ್ಯುಮಿನಿಯಮ್‌ , ಸತು, ಸ್ಟೀಲ್‌ ಅಥವಾ ಪ್ಲಾಸ್ಟಿಕ್‌ ಹಾಳೆಗಳನ್ನು ಬಳಸಿ ನಾಲಕ್ಕು ಡ್ರಮ್‌ಗಳು ತಯಾರಿಸಬಹುದು..

2. ಈ ಡ್ರಮ್‌ನ ಸುತ್ತಳತೆ 60 ಸೆಂ.ಮಿ ಮತ್ತು ಉದ್ದ 70 ಸೆಂ. ಮಿ. ಅದರ ತುದಿಯಲ್ಲಿ ರಂದ್ರಗಳಿರುತ್ತವೆ. ಅದರ ಮೂಲಕ ಬೀಜಗಳು ಡ್ರಮ್ಮನ್ನು ಎಳೆದುಕೊಂಡು ಹೋದಾಗ ಬೀಳುತ್ತವೆ.

3. ಅದರ ಮೇಲ್ಮೈನ ಉದ್ದಕ್ಕೂ ಎರಡೂ ಬದಿಯಲ್ಲೂ 39 ರಂದ್ರಗಳಿವೆ. ಡ್ರಮ್ಮು 3ಕೆಜಿ ಬೀಜ ಹಿಡಿಯುವುದು

4. ಈ ಡ್ರಮ್ಮನ್ನು ಎರಡು ಗಾಲಿಗಳ ಮೇಲೆ ಜೋಡಿಸಿದ ಅಚ್ಚಿನ ಮೇಲೆ ಕೂಡಿಸಿರುವರು. ಅದಕ್ಕೆ ಒಂದು ಹ್ಯಾಂಡಲ್‌ ಜೋಡಿಸಿರುವುರು. ಅದರಿಂದ ಅದನ್ನು ಎಳಯಲು ಉಪಯೋಗವಾಗುವುದು.

5. ಕಬ್ಬಿಣದ ಅಚ್ಚಿಗೆ ಡ್ರಮ್ಮಿನ ತ್ರಿಜ್ಯಕ್ಕಿಂತ ತುಸು ಜಾಸ್ತಿ ಉದ್ದವಿರುವ ಎಂಟು ಚೂಪಾದ ನೇಗಿಲ ಕುಳಗಳಂತಿನ ಭಾಗಗಳಿರುವವು. ಅವು ಡ್ರಮ್ಮಿನ ಲ್ಲಿನ ರಂದ್ರಗಳಿಗೆ ಸಂವಾದಿಯಾಗಿರುವವು.

6. ಉಪಕರಣ ವನ್ನು ಎಳೆದಾಗ ಅಲ್ಲರುವ ಎಂಡು ಮೊ

ಬೀಜ ಪ್ರಸರಿಸುವ ಮೂಲಕ ನೇರ ಬಿತ್ತನೆ ಮಾಡುವುದರ ಅನುಕೂಲಗಳು- Advantages of direct seeding by broadcasting

1. ಸಕಾಲದಲ್ಲಿ ಬಿತ್ತನೆ

2 ತ್ವರಿತ ಮತ್ತು ಸುಲಭ ಬೇರೂರುವಿಕೆ.

3. ಕೂಲಿ ಬಳಕೆಯಲ್ಲಿ ಮಿತವ್ಯಯ

4. ತೊಂದರೆಗಳು ಕಡಿಮೆ

5. ಫಸಲು ಬೇಗ ಕುಯಿಲಿಗೆ ಬರುವುದು (8-10 ದಿನಗಳು)

6. ನೀರಿನ ಸಮರ್ಪಕ ಬಳಕೆ ಮತ್ತು ನೀರಿನ ಕೊರತೆಯನ್ನು ಸಹಿಸುವ ಗುಣದ ಹೆಚ್ಚಳವಾಗುವುದು. ವೆಚ್ಚ ಮತ್ತು ಅನುಪಾತವೂ ಹೆಚ್ಚುವುದು.

02
Sep

ಜಲ ನಿರ್ವಹಣೆ - Water Management

ಜಲ ನಿರ್ವಹಣೆ - Water Management

1. ಭತ್ತದ ನೇರ ಬಿತ್ತನೆಯ ವಿಧಾನದಲ್ಲಿ ಜಲ ನಿರ್ವಹಣೆ ಅತಿ ಮುಖ್ಯವಾದದ್ದು.

2 ಮಡಿಯಲ್ಲಿ ನೀರುನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಮತ್ತು ಬಿತ್ತಿದ 2 ವಾರದ ವರೆಗ ಮಣ್ಣು ತೇವ ಇರಬೇಕು.

3. ನಂತರ, ಕಟಾವು ಮಾಡುವವರೆಗೆ 5 ಸೆ.ಮಿ ನೀರಿನ ಮಟ್ಟವನ್ನು ಕಾಪಾಡಬೇಕು. ಮತ್ತು ಕೊಯಿಲಿಗೆ 10 ದಿನ ಮುಂಚಿತವಾಗಿ ನೀರು ಹೊರಗೆ ಬಿಡಬೇಕು

02
Sep

ಕಳೆ ನಿಯಂತ್ರಣ- Weed control

ಕಳೆ ನಿಯಂತ್ರಣ- Weed control

1. ಕಳೆಯ ಪ್ರಮಾಣ ನೇರ ಬಿತ್ತಿದ ತಾಕಿನಲ್ಲಿ ನಾಟಿ ಮಾಡಿದ ತಾಕಿನಿಗಿಂತ ಹೆಚ್ಚು. ಆರಂಭದ ದೆಸೆಯಲ್ಲಿ ಕಳೆಯು ಸಸಿಯೊಂದಿಗೆ ಸ್ಪರ್ಧೆಗೆ ನಿಲ್ಲುತ್ತವೆ. ಬೆಳೆ ಕುಂಠಿತವಾಗಿ ಅದರಿಂದ ಮುಂದೆ ಉತ್ಪನ್ನ ಕಡಿಮೆಯಾಗುವುದು.

2. ಆದ್ದರಿಂದ ಇಲ್ಲಿ ಕೈನಿಂದ ಕಳೆ ತೆಗೆಯುವುದು ಉತ್ತಮ, ಮೊದಲ ಕಳೆಯನ್ನು ಬಿತ್ತಿದ 20 ದಿನಗಳ ನಂತರ ಮತ್ತು ಎರಡನೆ ಕಳೆಯನ್ನು 40 ದಿನದ ನಂತರ ತೆಗೆಯಬೇಕು.

3. ಈಗ ರಾಸಾಯನಿಕ ಕಳೆನಾಶಕಗಳು ಬಂದಿವೆ. ಅವನ್ನೂ ನೇರಬಿತ್ತನೆ ಮಾಡಿದ ಬೆಳೆಗೆ ಬಳಸಬಹುದು. ಅದರಲ್ಲೂ ಪ್ರಿಟಲಾಕ್ಲಾರ್‌ +ಸೇಫ್ನರ್‌ ಸಾಫ್ಟ 30% ಹೆಕ್ಟೇರಿಗೆ 1 ಲೀ ನಂತೆ ( pretilachlor + Safener (Sofit 30% EC) @ l lt.ha ( 75ಕೆಜಿ ಯನ್ನು ಮರಳಿನೊಂದಿಗೆ ಸೇರಿಸಿ ಬಿತ್ತನೆಯಾದ 3 – 5 ದಿನಗಳ ನಂತರ ಹಾಕಬಹುದು. ಅದು ಕಳೆಗಳನ್ನು ಪರಿಣಾಕಾರಿಯಾಗಿ ತಡೆಗಟ್ಟುವುದು

Copy rights | Disclaimer | RKMP Policies