Best Viewed in Mozilla Firefox, Google Chrome

ನೀರಾವರಿ ಮತ್ತು ಅಂತರ್‌ಬೆಳೆ (Irrigation and Interculture)

1 ಮೊದಲ 10 ದಿನ, ಮಡಿಯಲ್ಲಿನ ನೀರನ್ನು 2.5 ಸೆಂ.ಮೀ. ಗೆ ಮಿತಿ ಗೊಳಿಸಿ. ಉಳಿದ ಬೆಳವಣಿಗೆಯ ಮಟ್ಟವು 5.0 ಸೆಂ.ಮೀ ಇರಲಿ. ಕೊಯ್ಯುವ 10 ದಿನ ಮುಂಚೆ ಮಟ್ಟವನ್ನು 2.5 ಸೆ.ಮಿ. ಗೆ ಇಳಿಸಿ.

2. ಹೂ ಬಿಡುವ ಬೆಳೆಯ ಸೂಕ್ಷ್ಮ ಹಂತದಲ್ಲಿ ಮೇಲುಗೊಬ್ಬರ ಹಾಕಬೇಕು

3.ನೀರಿನ ಕೊರತೆ ಇದ್ದಾಗ, ಮಣ್ಣಿನ ತೇವವನ್ನು ನಿರ್ವಹಿಸುವುದು ಅಗತ್ಯ. ಇಲ್ಲವಾದರೆ ಇಳುವರಿಯು 8-10%. ಕಡಿಮೆಯಾಗಬಹುದು. ಸೂಚನೆ: ಜಿಂಕ್‌/ಸತುವಿನ ಕೊರತೆ ಕಂಡುಬಂದರೆ , ಸಸಿಗಳಿಗೆ ನಾಟಿಯ ನಂತರ 0.5 to 1% ಜಿಂಕ್‌ ಸಲ್ಫೇಟ್‌ ದ್ರಾವಣ ಸಿಂಪಡಿಸಿ.

ಜಿಂಕ್‌/ ಸತುವಿನ ಸಲ್ಫೇಟಿನ ಬಳಕೆ (Use of zinc sulphate)

1. ಒಂದು ಹೆಕ್ಟೇರಿಗೆ 20 ಕೆಜಿ ಸತುವಿನ ಸಲ್ಫೇಟ್‌ ಅನ್ನು ಮಣ್ಣಿಗೆ ಮೂರುವರ್ಷ/ಬೆಳೆ ಗೊಮ್ಮೆ ಸೇರಿಸಿ.

2. ಬ್ಲೆಂಡೆಡ್‌ ಯೂರಿಯಾ ಬಳಕೆ ಯೂರಿಯಾವನ್ನು ಟಾಪ್‌ ಡ್ರೆಸ್ಸಿಂಗ್‌ ಗೆ ಬಳಸಿದರೆ ಅದನ್ನು ಕಳಿಯಲು ಈ ರೀತಿ ಬಿಡಬೇಕು.: 10ಕೆಜಿ ಯೂರಿಯಾವನ್ನು 50-100 ಕೆಜಿ ಜೇಡಿ ಮಣ್ಣಿನೊಂದಿಗೆ ಬೆರಸಿ, ತೇವ ಇರುವಂತೆ ಸಾಕಷ್ಟು ನೀರು ಸಿಂಪಡಿಸಿ.

3. ಈ ಮಿಶ್ರಣದ ರಾಶಿಯನ್ನು 24 ತಾಸು ಹಾಗೆ ಬಿಡಿ. ಭೂಮಿಯಲ್ಲಿನ ನೀರನ್ನು ಬಸಿಯಲು ಬಿಡಿ. ನಂತರ ಸಮನಾಗಿ ಬೀಜವನ್ನು ಪ್ರಸಾರ ಮಾಡಿ.

4. ಗದ್ದೆಗೆ 24 ಗಂಟೆಗಳ ನಂತರ ನೀರು ಬಿಡಿ..ಯೂರಿಯಾ ಮಿಶ್ರಿತ ಮಣ್ಣನ್ನು ಎರಡು,ಹಂತದಲ್ಲಿ ಹಾಕಿ. ಅಂದರೆ. ಮೊದಲ ಸಲ, ನಾಟಿಯಾದ 15 ದಿನಗಳ ಮೇಲೆ . ಎರಡನೆ ಸಲ, ತೆಂಡೆ ಒಡೆಯುವ ಮೊದಲು.

ನಾಟಿ ಮಾಡುವುದು ಮತ್ತು ಮೇಲು ಗೊಬ್ಬರ (Transplanting and Top dressing)

1. ಸೂಕ್ತ ಸಮಯದಲ್ಲಿ ನಾಟಿ ಮಾಡುವುದು ಹೆಚ್ಚು ಉತ್ಪನ್ನ ನೀಡುವ ಮತ್ತು ಸಂಕರ ತಳಿಗಳು ಹೆಚ್ಚಿನ ಉತ್ಪನ್ನ ಕೊಡಲು ಅತಿ ಮುಖ್ಯ ಅಂಶವಾಗಿದೆ

2. ನಾಟಿ ಮಾಡಲು 20-25 ದಿನ ವಯಸ್ಸಿನ ಸಸಿಗಳನ್ನು ಬಳಸಿ.. 50% N, 50% K20 ಮತ್ತು ಪೂರ್ಣ ಪ್ರಮಾಣದ P2O5 ಗಳನ್ನು ನಾಟಿ ಮಾಡುವ ಮುನ್ನವೆ ಹಾಕಿರಿ.

3. ಸಸಿಗಳನ್ನು 20 ಸೆಂ.ಮೀ ಸಾಲಿನಲ್ಲಿ 10 ಸೆಂ.ಮೀ ಅಂತರದಲ್ಲಿ ನಾಟಿಮಾಡಿ ಒಂದೊಂದು ಬುಡಕ್ಕೆ 2-3 ಸಸಿಗಳು ಇರಲಿ. ಕಡಿಮೆ ಅವಧಿಯ ತಳಿಗಳಾದ ಮಧು, ಮಂಗಲ, ಮತ್ತು ಪುಷ್ಪ ನಾಟಿ ಮಾಡಿದರೆ ಸಸಿಗಳನ್ನು 15 ಸೆಂ.ಮೀ ಸಾಲಿನಲ್ಲಿ 10 ಸೆಂ.ಮೀ ಅಂತರದಲ್ಲಿ 2-3 ಸಸಿಗಳನ್ನು ಒಟ್ಟಿಗೆ ಸೇರಿಸಿ ನಾಟಿಮಾಡಿ..

4.ಸಾಲು ನಾಟಿ ಮಾಡಲು ಸಾಧ್ಯವಾಗದಿದ್ದರೆ ಸಸಿಗಳ ಸಾಂದ್ರತೆಯು ಒಂದು ಚದರ ಮೀಟರ್‌ಗೆ 50 ಬುಡಗಳಾದರೂ ಇರಬೇಕು. ಮಧು, ಮಂಗಲ, ಮತ್ತು ಪುಷ್ಪ ತಳಿಗಳನ್ನು ಬಿಟ್ಟು ಬೇರೆಲ್ಲವಕ್ಕೂ ಪಾಲಿಸಬೇಕು. ಮಧು, ಮಂಗಲ, ಮತ್ತು ಪುಷ್ಪ ತಳಿಗಳಿಗೆ ಸಸ್ಯ ಸಾಂದ್ರತೆಯು ಒಂದು ಚದರ ಮೀಟರ್‌ಗೆ 67 ಬುಡಗಳಾಗಿರಲಿ (6-7 hills per sq.ft.).

ಮುಖ್ಯ ಭೂಮಿಯನ್ನು ಹದ ಮಾಡುವಿಕೆ (Preparation of main field)

1. ಒಣ ಭೂಮಿಯನ್ನು ಎರಡು ಸಾರಿ ಉಳುಮೆ ಮಾಡಿ . ನಂತರ ನೀರು ನಿಲ್ಲಿಸಿ(2-3 ಸೆಮಿ) ಕೆಸರು ಗದ್ದೆಯನ್ನು ಉಳುಮೆ ಮಾಡಿ. ನಡುವೆ ಐದಾರು ದಿನ ಅಂತರವಿರಲಿ, ಭೂಮಿಯನ್ನು ಸಮತಟ್ಟು ಮಾಡಿ..

2. ನಾಟಿ ಮಾಡುವ ಮುನ್ನ ಕೊಟ್ಟಿಗೆ ಗೊಬ್ಬರ/ ಕಾಂಪೋಸ್ಟ ಅನ್ನು ಹೆಕ್ಟೇರ್‌ಗೆ 10 ಟನ್‌ ಹಾಕಿ.

3. ಅಗತ್ಯ ಬಿದ್ದರೆ ಹಸಿರೆಲೆ ಗೊಬ್ಬರ ಹಾಕಬೇಕು. ಹೆಕ್ಟೇರಿಗೆ 5 ಟನ್‌ ಹಸಿರೆಲೆ ಮತ್ತು ಚಿಗುರು ಕುಡಿಗಳನ್ನು ನಾಟಿಗೆ ಮೂರುವಾರ ಮೊದಲೆ ಹಾಕಬೇಕು.

4.ಮಣ್ಣು ಸವಳು ಅಥವ ಜವಗು ಆಗುವ ಅನುಮಾನವಿದ್ದರೆ ಸೂಕ್ತವಾದ ಬಸಿ ಕಾಲುವೆ ಇರಲಿ. ಗೊಬ್ಬರವನ್ನು ಹಾಕಿದ ಮೇಲೆ ನೀರನ್ನು ಒಂದು ಮಡಿಯಿಂದ ಇನ್ನೊಂದು ಮಡಿಗೆ ಹರಿದು ಹೋಗಲು ಬಿಡಬಾರದು.

03
Jul

ಹಸಿ ಸಸ್ಯ ಕ್ಷೇತ್ರ (Wet Nursery)

ಹಸಿ ಸಸ್ಯ ಕ್ಷೇತ್ರ (Wet Nursery)

1. ಶುಷ್ಕ ಸಸ್ಯ ಕ್ಷೇತ್ರಕ್ಕೆ ಬೇಕಾದಷ್ಟೆ ಜಾಗ ಇದಕ್ಕೂ ಬೇಕು.

2. ಸಸ್ಯ ಕ್ಷೇತ್ರ ಬೆಳಸುವ ಜಾಗವು ಚೆನ್ನಾಗಿ ಹದವಾಗಿ, ಸಮತಟ್ಟವಾಗಿ ಮತ್ತು ಕಳೆ ರಹಿತವಾಗಿರಬೇಕು.

3. ನೀರಾವರಿ ಮತ್ತು ನೀರು ಬಸಿಯುವ ಸೂಕ್ತ ವ್ಯವಸ್ಥೆ ಇರಲಿ.

4. ಪ್ರತಿ 100 ಚ. ಮಿ ಜಾಗಕ್ಕೆ ಸೂಕ್ತಪ್ರಮಾಣದರಸಗೊಬ್ಬರ ಹಾಕಿರಿ (ಸುಮಾರು 1000 ಚ.ಅಡಿ.) ಸಸಿಗಳ ಬೆಳೆವಣಿಗೆ ದರ ಕಡಿಮೆಯಾಗುವ ತಂಪಾದ ಪ್ರದೇಶದಲ್ಲಿ ಪ್ರತಿ ಸಸ್ಯ ಕ್ಷೇತ್ರ ಮಡಿಗೆ 1kg N, 0.4 kg P2O5 and 0.5 kg K20, ಎರಡು ಪಟ್ಟು P2O5 ರಂಜಕಗಳನ್ನು ಹಾಕಬೇಕು.

5. ಮೊಳಕೆಯೊಡೆದ ಬೀಜಗಳನ್ನು ಬಿತ್ತಿರಿ (24 ತಾಸು ನೆನಸಿ ಮತ್ತು ಅವನ್ನು ಬೆಚ್ಚನೆಯ ತೇವದ ವಾತಾವರಣದಲ್ಲಿ ಮೊಳೆಯುವ ತನಕ 36-48 ಗಂಟೆಯವರೆಗೆ ಇಡಿ.

6. ನೀರು ಬಸಿದ 3 ಚ. ಮಿ. (( ಸುಮಾರು 10 ಚ. ಅಡಿ) ಮಡಿಯಲ್ಲಿ ಪ್ರತಿಯೊಂದಕ್ಕೆ 50-70ಗ್ರಾಂ ಬೀಜವನ್ನು ಅವುಗಳ ಗಾತ್ರವನ್ನುಅವಲಂಬಿಸಿ ಬಿತ್ತನೆ ಮಾಡಬೇಕು.

7. ಮೊದಲ ಕೆಲ ದಿನ ಮಡಿಯು ತೇವದಿಂದ ಕೂಡಿರಲಿ. ಮಡಿಗಳಲ್ಲಿ ನೀರು ನಿಲ್ಲಿಸುವುದು ಬೇಡ.

8. ಸಸಿಗಳು 2-3 ಸೆಂ.ಮೀ. ಎತ್ತರ ವಾದಾಗ

03
Jul

ಶುಷ್ಕ ಸಸ್ಯ ಕ್ಷೇತ್ರ (Dry nursery)

ಶುಷ್ಕ ಸಸ್ಯ ಕ್ಷೇತ್ರ (Dry nursery)

 • ಸಸ್ಯ ಕ್ಷೇತ್ರಯನ್ನು ಸುಮಾರು 750ಮಿ . ಜಮೀನಿನಲ್ಲಿ 2 ತಾಕಿನಲ್ಲಿ ಸಸಿ ಬೆಳೆಸಿರಿ. ಅದು ಒಂದು ಹೆಕ್ಟೇರಿಗೆ ಸಾಕು.
 • 75 ಸಸಿ ಮಡಿಗಳನ್ನು ಮಾಡಿ, 25ಅಡಿ ಉದ್ದ, 4 ಅಡಿ ಅಗಲ ಮತ್ತು 4 ಅಂಗುಲ ಎತ್ತರವಿರಲಿ.
 • ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟು 25 ಕೆಜಿ ಸೇರಿಸಿ. ಜತೆಗೆ 125 ಗ್ರಾಂ ಯುರಿಯಾ ಅಥವಾ 450 ಗ್ರಾಂ ಅಮೋನಿಯಂ ಸಲ್ಫೇಟ್‌(90 ಗ್ರಾಂ ಸಾರಜನಕ), 280 ಗ್ರಾಂ.ಏಕ ಸೂಪರ್ ಫಾಸ್ಫೇಟ್‌ (45ಗ್ರಾಂ. P2O5) ಮತ್ತು 75 ಗ್ರಾಂ. ಕೊಡಿ
 • ಪೊಟಾಷ್‌ ಮುರಿಯೇಟ್‌ (45ಗ್ರಾಂ K2O) ಅಥವಾ ಇನ್ನು ಯಾವುದೋ ಸಮನಾದ ಸತ್ವದ ರಸಗೊಬ್ಬರವನ್ನು ಪ್ರತಿ ಮಡಿಗೆ ಹಾಕಿ. ಚಿಕಿತ್ಸೆ ಮಾಡಿದ ಬೀಜಗಳನ್ನುಸಮನಾಗಿ ಎಲ್ಲ ಮಾಡಿಗಳಲ್ಲೂ ಹಾಕಿ.

ಸಸ್ಯ ಕ್ಷೇತ್ರದ ನಿರ್ವಹಣೆ (Nursery Management)

ಎರಡುವಿಧದ ಸಸ್ಯ ಕ್ಷೇತ್ರಗಳು ಇವೆ

 • ಶುಷ್ಕ ಸಸ್ಯ ಕ್ಷೇತ್ರ
 • ನೀರಾವರಿ ಸಸ್ಯ ಕ್ಷೇತ್ರ

ಉಪ್ಪುನೀರಿನ ಬೀಜೋಪಚಾರದ ನಂತರ ಬೀಜಗಳ ಆಯ್ಕೆ (Selection of seed by salt water treatment)

 • ಗಟ್ಟಿ ಬೀಜಗಳನ್ನು ಮತ್ತು ಉಪ್ಪುನೀರನ್ನು 1:4 ಪ್ರಮಾಣದಲ್ಲಿ ತೆಗೆದುಕೊಳ್ಳಿ (ಉಪ್ಪು ನೀರು ಗಾತ್ರದಲ್ಲಿ).
 • ಬೀಜ ಮುಳುಗಿಸಿ. ಚೆನ್ನಾಗಿ ಕಲಕಿ, ತೇಲುವವನ್ನು ತೆಗೆಯಿರಿ. ಭಾರವಾದವನ್ನು ಸಿಹಿನೀರಲ್ಲಿ ತೊಳೆಯಿರಿ (ಪ್ರಮಾಣಿತ ಬೀಜವಾದರೆ ಉಪ್ಪುನೀರಿನ ಚಿಕಿತ್ಸೆ ಅನಗತ್ಯ).

ಸಾಗುವಳಿಗೆ ಬೇಕಾದ ಸಾಮಗ್ರಿಗಳು (ಪ್ರತಿ ಹೆಕ್ಟೇರಿಗೆ) - Inputs required for cultivation (per hectare)

ಗೊಬ್ಬರ (ಕೆ.ಜಿ/ಹೆ)

ನಾಟಿ ಮಾಡುವಿಕೆ

 

ಆಮ್ಲಜನಕಯುಕ್ತ ಭತ್ತ ಬೆಳೆ/ಡ್ರಿಲ್ ಬಿತ್ತನೆ/ಎಸ್ ಆರ್ ಐಸಂಕರ ಭತ್ತ

ವಲಯ 4,5,6,7 ಮತ್ತು 8

ಖಾರಿಫ್      ಬೇಸಿಗೆವಲಯ 9 ಖಾರಿಫ್ವಲಯ 10 ಖಾರಿಫ್ಸಾರಜನಕ1001257560100120ರಂಜಕ506275305060ಪೊಟಾಶ್506290455060

 

ಕರ್ನಾಟಕದಲ್ಲಿ ಅಕ್ಕಿ ಉತ್ಪಾದನೆಯ ತಂತ್ರಜ್ಞಾನ (Rice Production Technologies of Karnataka)

 • ಅಕ್ಕಿಯು ಈ ಪ್ರದೇಶದ ಅತಿ ಮುಖ್ಯ ಆಹಾರಧಾನ್ಯ. ಕರ್ನಾಟಕದಲ್ಲಿ ಇದನ್ನು 14.50 ಲಕ್ಷ ಹೆಕ್ಟೇರಿನಲ್ಲಿ ಬೆಳೆಯಲಾಗುತ್ತಿದೆ , ವಾರ್ಷಿಕ ಉತ್ಪನ್ನವು ಸರಾಸರಿ 55.72 ಟನ್‌ ಆಗಿದೆ ಮತ್ತು ವಾರ್ಷಿಕ ಇಳುವರಿಯು ಹೆಕ್ಟೇರಿಗೆ 4046 ಕೆಜಿ.
 • ಅಕ್ಕಿಯನ್ನು ಬೇರೆ ಬೇರೆ ವಾತಾವರಣದಲ್ಲಿ ನೀರಿನ ಸಹಾಯದಿಂದ ಬೆಳೆಯುವರು. ಉದಾ: ಕಾಲುವೆಗಳು, ಕೆರೆಗಳು, ಏತ ನೀರಾವರಿ ಮತ್ತು ಮಳೆಯ ಆಧಾರದಲ್ಲಿ ಮುಂಗಾರು ಮತ್ತು ಹಿಂಗಾರು ಗಳೆರಡರಲ್ಲೂ ಬೆಳೆಯುವರು.
 • ಕರ್ನಾಟಕದ ದಕ್ಷಿಣ ಭಾಗದಲ್ಲಿ (ವಲಯ 4, 5 ಮತ್ತು ವಲಯ 6ರ ಕೆಲ ಭಾಗಗಳಲ್ಲಿ ), ಅದರಲ್ಲಿ ಕೃಷ್ಣರಾಜಸಾಗರ (ಮಂಡ್ಯ ಮತ್ತು ಮೈಸೂರಿನ ಕೆಲಭಾಗಗಳು, ವಲಯ -6; ವಾಣಿನಿವಿಲಾಸ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶ , ವಲಯ-4 (ಹಿರಿಯೂರು ಮತ್ತು ದಾವಣಗೆರೆ) . ಅಕ್ಕಿಯನ್ನು1.42 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಾಲುವೆ ನೀರಾವರಿಯಿಂದ ಬೆಳೆಯುವರು. ಅಲ್ಲಿನ ವಾರ್ಷಿ ಉತ್ಪನ್ನ 2.79 ಟನ್‌ಗಳು.
24
Jun

ತ್ರಿಪ್ಸ್

 

ಸ್ಟೆಂಕಿಟೋತ್ರಿಪ್ಸ್ ಬೈಫಾರ್ಮಿಸ್‌

ತ್ರಿಪಿಡೇ

ಥೈಸನೊಪ್ಟೆರಾ

 

Copy rights | Disclaimer | RKMP Policies