Best Viewed in Mozilla Firefox, Google Chrome

ಬಿಳಿ ಬೆನ್ನಿನ ಮಿಡತೆ - Whitebacked planthopper

ವೈಜ್ಞಾನಿಕ ಹೆಸರು - ಸಾಗಟೆಲ್ಲಾ ಫರ್ಸಿಫೆರಾ

ಆದೇಶ - ಡೆಲ್ಫಾಸಿಡೇ

ಕುಟುಂಬ - ಹೆಮಿಪ್ಟೆರಾ

ಬಿಳಿ ಬೆನ್ನಿನ ಮಿಡತೆಯ ಧಾಳಿಯ ಲಕ್ಷಣಗಳು - Symptom of attack of Whitebacked planthopper

1. ಹೆಚ್ಚಿನ ಸಂಖ್ಯೆಯಲ್ಲಿ ಕೀಟಗಳು ಧಾಳಿ ಮಾಡಿದಾಗ ಸಸ್ಯದ ಹೊರಗಿನ (hill) ಎಲೆಗಳು ಸುಟ್ಟ ಲಕ್ಷಣಗಳನ್ನು ತೋರಿಸುತ್ತದೆ.

2. ಭತ್ತದ ಗದ್ದೆಗಳಲ್ಲಿನ ಮಿಡತೆಗಳ ಸುಟ್ಟ ಹಾನಿಯು ಸಮಾನವಾಗಿ ಹಂಚಿಹೋಗಿದ್ದರೆ, ಬಿ ಹೆಚ್ ಪಿ ಯಲ್ಲಿ ವರ್ತುಲಾಕಾರದ ಮಚ್ಚೆಗಳಂತೆ ಅಲ್ಲಲ್ಲ ಕಾಣಿಸಿಕೊಳ್ಳುತ್ತವೆ.

ಬಿಳಿ ಬೆನ್ನುಮಿಡತೆಯ ಹಾನಿಯ ಸ್ವರೂಪ - Nature of damage of Whitebacked planthopper

ಈ ಮಿಡತೆಯು ಭತ್ತದ ಕೃಷಿಯ ಆರಂಭದ ಹಂತದಲ್ಲಿ, ವಿಶೇಷವಾಗಿ ಸಸ್ಯಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳತ್ತದೆ. (ಇದು ನೀರು ನಿಂತ ಜಮೀನಿನಲ್ಲಿ ನಾಲ್ಕು ತಿಂಗಳೊಳಗಿನ ಸಸಿಗಳ ಮೇಲೆ ಧಾಳಿ ಮಾಡುತ್ತದೆ ಅಲ್ಲದೆ ಬೆಳೆಯ ವಯಸ್ಸು ಹೆಚ್ಚದಂತೆ ಇದರ ಉಪಠಳವೂ ಹೆಚ್ಚಾಗುತ್ತದೆ. ಬೂಟಿಂಗ್ ಹಂತ ಹಾಗೂ ಹೆಡಿಂಗ್ ಹಂತಕ್ಕಿಂತ ತೆಂಡೆ ಹೊಡೆಯುವ ಸಮಯದಲ್ಲಿ ಭತ್ತವು ಈ ರೋಗ

02
Sep

ಹಸಿರು ಎಲೆಮಿಡತೆ - Green leafhopper

ಹಸಿರು ಎಲೆಮಿಡತೆ - Green leafhopper

ವೈಜ್ಞಾನಿಕ ಹೆಸರು - ನೆಫೊಟೆಟಿಕ್ಸ್ ವೈರಸೆನ್ಸ್

ಆದೇಶ - ಸಿಕಡೆಲ್ಲಿಡೇ

ಕುಟುಂಬ - ಹೆಮಿಪ್ಟೆರ

ಹಸಿರು ಎಲೆ ಮಿಡತೆಯ ಧಾಳಿಯ ಲಕ್ಷಣಗಳು - Symptoms of attack of Green leafhopper

ಬಾಧಿತ ಸಸ್ಯವು ತಿಳಿಹಳದಿ ಬಣ್ಣಕ್ಕೆ ತಿರುಗುವುದು ಮತ್ತು ಬೆಳವಣಿಗೆ ಕುಂಠಿತವಾಗುವುದು. ಸಸ್ಯವನ್ನು ಅಲುಗಿಸಿದರೆ ಹೆಚ್ಚಿನ ಸಂಖ್ಯೆಯ ಎಲೆಮಿಡತೆಗಳು ನೀರಿಗೆ ಜಿಗಿಯುವವು.

ಹಸಿರು ಎಲೆ ಮಿಡತೆ ಮಾಡುವ ಹಾನಿ - Nature of damage of Green leafhopper

ಎಳೆಯ ಮತ್ತು ಬೆಳೆದ ಕೀಟಗಳೆರಡೂ ಎಲೆಯ ಮತ್ತು ಅದರ ಆವರಣದಿಂದ ರಸವನ್ನು ಹೀರುವವು. ಅವು ಫ್ಲೋಯಮ್‌ ಕುಡಿಯುವುದು. ಕ್ಸೈಲಮ್‌ಗಿಂತ ಫ್ಲೋಯೆಮ್ ನಲ್ಲಿ ಅಮಿನೋ ಆಮ್ಲದ ಪ್ರಮಾಣ ಹೆಚ್ಚಿರುವುದು. ಕ್ಸೈಲಮ್‌ ಮತ್ತು ಫ್ಲೋಯಮ್‌ ನಾಳಗಳು ಇದರ ಅಂಟಿನಿಂದ ಮುಚ್ಚಿ ಹೋಗಿ ಆಹಾರದ ಸಾಗಣಿಕೆಗೆ ಅಡಚಣೆಯಾಗುವುದು. ಸೋಂಕು ಕಡಿಮೆ ಇದ್ದರೆ ಸಸ್ಯದ ವಂಶಾಭಿವೃದ್ಧಿ ಭಾಗಗಳ ಶಕ್ತಿ ಕಡಿಮೆಯಾಗುವುದು. ಸೋಂಕು ತೀವ್ರವಾಗಿದ್ದರೆ ಸಸ್ಯವು ಸೊರಗುವುದು ಮತ್ತು ಸಾಯಲೂಬಹುದು ಸಸಿಗಳು ಆಹಾರ ಪಡೆವಾಗ

02
Sep

ತ್ರಿಪ್ಸ್- Thrips

ತ್ರಿಪ್ಸ್- Thrips

ವೈಜ್ಞಾನಿಕ ಹೆಸರು - ಸ್ಟೆಂಕಿಟೋತ್ರಿಪ್ಸ್ ಬೈಫಾರ್ಮಿಸ್‌

ಆದೇಶ - ಥೈಸನೊಪ್ಟೆರಾ

ಕುಟುಂಬ - ತ್ರಿಪಿಡೇ

ತ್ರಿಪ್ಸ್ ಧಾಳಿಯ ಲಕ್ಷಣ - Symptom of attack of Thrips

ಬಾಧಿತ ಸಸ್ಯಕ್ಷೇತ್ರಗಳು ತಿಳಿ ಹಳದಿಬಣ್ಣದ ಎಲೆಗಳನ್ನು ಹೊಂದಿ ತುದಿ ಕಂದು ಬಣ್ಣದ್ದಾಗಿರುವುದು. ಅದರ ಮೇಲೆ ಒದ್ದೆಯಾದ ಕೈ ಆಡಿಸಿದರೆ ಬಹುಸಂಖ್ಯೆಯ ಬೆಳೆದ ಕಪ್ಪುಬಣ್ಣದ ಹುಳುಗಳು ಅಂಗೈಗೆ ತಗುಲುತ್ತವೆ. ಈ ರೋಗವು ಚೆನ್ನಾಗಿ ಮಳೆ ಬಂದರೆ ತನ್ನಿಂದ ತಾನೆ ಇಲ್ಲದಾಗುವುದು.

ತ್ರಿಪ್ಸ್ ನ ಹಾನಿಯ ಲಕ್ಷಣಗಳು - Nature of damage of Thrips

ಪ್ರಬುದ್ಧ ಹಾಗೂ ಎಳೆಯ ಕೀಟಗಳೆರಡೂ ಎಳೆಯ ಎಲೆಗಳನ್ನು ತರಿದು ಸಸ್ಯದ ರಸವನ್ನು ಹೀರುತ್ತವೆ. ಪರಿಣಾಮವಾಗಿ ಎಲೆಗಳ ಮೇಲೆ ತೆಳ್ಳಗಿನ ಹಳದಿ ಅಥವಾ ಬೆಳ್ಳಿಯಬಣ್ಣದ ಗೆರೆ/ ರೇಖೆಗಳು ಕಾಣಿಸಿಕೊಳ್ಳುತ್ತವೆ. ನಂತರ ಎಲೆಗಳು ಲಂಬವಾಗಿ ಸುರುಳಿ ಸುತ್ತಿಕೊಂಡು ತುದಿಯಿಂದ ಕೊನೆಯೆಡೆಗೆ ಒಣಗಿಕೊಂಡು ಬರುತ್ತವೆ. ತೀವ್ರವಾದ ಸೋಂಕಿನ ಸಂದರ್ಭದಲ್ಲಿ ಸಂಪೂರ್ಣಸಸ್ಯಕ್ಷೇತ್ರವು ಒಣಗಿ ಸಸಿಗಳನ್ನು ನೀಡುವಲ್ಲಿ ಸೋಲಬಹುದು.

02
Sep

Growth rates and Productivity of Rice crop in Karnataka

ಬೆಳವಣಿಗೆಯ ಗತಿ (1999-00 ರಿಂದ 2005-06)- Growth rates (1999-00 to 2005-06)

1. ಕರ್ನಾಟಕವು ಇಳುವರಿಯಲ್ಲಿ ಧನಾತ್ಮಕ ಬೆಳವಣಿಗೆಯನ್ನೂ, ವಿಸ್ತೀರ್ಣ ಹಾಗೂ ಉತ್ಪಾದಕತೆಯಲ್ಲಿ ಶೇ ಕಡವಾರು ಬೆಳವಣಿಗೆಯನ್ನೂ ದಾಖಲಿಸಿದೆ.

2. ಗದಗ ಹಾಗೂ ಗುಲ್ಬರ್ಗ ಜಿಲ್ಲೆಗಳು ಧನಾತ್ಮಕ ಸಿ.ಜಿ ಆರ್ ಅನ್ನು ದಾಖಲಿವೆ, ಹಾಗೂ ಲಂಬೀಯ ರೇಖಾತ್ಮಕ ಬೆಳವಣಿಗೆಯ ಗತಿ, ವಿಸ್ತೀರ್ಣ, ಉತ್ಪಾದಕತೆ ಮತ್ತು ಇಳುವರಿಯಲ್ಲಿ ಶೇಕಡವಾರು ಬೆಳವಣಿಗೆ ಯನ್ನು ದಾಖಲಿಸಿವೆ.

3. ವಿಸ್ತೀರ್ಣ ಹಾಗೂ ಉತ್ಪಾದಕತೆಯಲ್ಲಿ ಧನಾತ್ಮಕ ಬೆಳವಣಿಗೆಯನ್ನು ಮೈಸೂರು, ಮಂಡ್ಯ, ಹಾಗೂ ಬೆಳಗಾಂನಲ್ಲಿ; ಉತ್ಪಾದಕತ ಮತ್ತು ಇಳುವರಿಯಲ್ಲಿ ಧನಾತ್ಮಕ ಬೆಳವಣಗೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ; ಬೆಳ್ಳಾರಿಯಲ್ಲಿ ಉತ್ಪಾದಕತೆಯನ್ನು; ಬೆಂಗಳೂರು (ನಗರ), ಕೋಲಾರ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ಕೊಡಗು, ದಾವಣಗೆರೆ, ಹಾಗೂ ಹಾವೇರಿಯಲ್ಲಿ ಕೇವಲ ಇಳುವರಿಯಲ್ಲಿ ಧ್ತ್ಮಕ ಬೆಳವಣಿಗೆಯನ್ನುಬೆಂಗಳೂರು (ಗ್ರಾಮಾಂತರ), ಹಾಸನ, ಚಿಕಮಗಳೂರು, ಹಾಗೂ ಬೀದರದಲ್ಲಿ ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಲಾಗಿದೆ

ವಿಶೇಷ ತಯಾರಿಗಾಗಿ/ ಭತ್ತ/ಅಕ್ಕಿ ಆಧಾರಿತ ಉತ್ಪನ್ನಗಳಿಗಾಗಿ/ ಔಷಧೀಯ ಬಳಕೆಗಾಗಿ ತಳಿಗಳು - Varieties for special preparations/rice based products/medicinal use in Karnataka

1. ಎದುರುಬೆಳ್ತಿಗೆ/ (ಅರೆಬೇಯಿಸಿದ) ಅಕ್ಕಿ: ಶರಾವತಿ, ಕೆ,ಹೆಚ್,ಪಿ-10.

2.ಅವಲಕ್ಕಿ - ಐ.ಇ.ಟಿ 7191, ಕೆ,ಹೆಚ್,ಪಿ 2, ಐ.ಇ.ಟಿ 13901, ಕೆ,ಹೆಚ್,ಪಿ 10.

3. ಪುರಿ ಅಥವಾ ಮಂಡಕ್ಕಿ - ಕೆ,ಹೆಚ್,ಪಿ 21, ಐ.ಇ.ಟಿ 7191, ತುಂಗಾ, ಐ.ಇ.ಟಿ 13901.

4. ಸುವಾಸನಾಯುಕ್ತ –ಜೀರಿಗೆ ಸಣ್ಣ.

ಕರ್ನಾಟಕದಲ್ಲಿ ಭತ್ತ –ಆಧಾರಿತ ಬೆಳೆ ಪದ್ಧತಿ - Rice Based Cropping Systems in Karnataka

1. ಮಳೆ -ಆಧಾರಿತ :

ಭತ್ತ, ರಾಗಿ /ಬಿಳಿ ಜೋಳ ( sorghum) / ಸಜ್ಜೆ (pearl millet) / ಮುಸುಕಿನ ಜೋಳ(maize) / ತೊಗರಿ (red gram) / ಶೇಂಗಾ/ ಸೂರ್ಯಕಾಂತಿ / ಹತ್ತಿ / ತಂಬಾಕು / ಕಬ್ಬು / ಆಲೂಗಡ್ಡೆ / ಮೆಣಸು

2. ನೀರಾವರಿಯಿರುವ ಬೆಳೆಗಳು :

ನೀರಾವರಿ ಕ್ಷೇತ್ರದಲ್ಲಿರುವ ಬೆಳೆಗಳು: ಭತ್ತ-ಭತ್ತ, ಭತ್ತ- ಶೇಂಗಾ, ಭತ್ತ-ಮುಸುಕಿನ ಜೋಳ, ಭತ್ತ-ರಾಗಿ, ಭತ್ತ –ಅಲಸಂದೆ. ಕೆರೆ/ಬಾವಿಯ ನೀರಾವರಿಯಲ್ಲಿ ಬೆಳೆಯುವ ಬೆಳೆಗಳು: ಭತ್ತ- ಶೇಂಗಾ, ಭತ್ತ- ರಾಗಿ, ಭತ್ತ- ಬಿಳಿ ಜೋಳ

ರಾಜ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಕೃಷಿಯ ಪಾತ್ರ - Importance of Agriculture in State Economy

1. ರಾಜ್ಯವು ಸುಮಾರು 9.85 ಮಿ.ಹೆಕ್ಟೇರ್ ವಿಸ್ತೀರ್ಣವನ್ನು ಒಳಗೊಂಡಿದ್ದು, ಅದು ಒಟ್ಟು ವಿಸ್ತೀರ್ಣದ 51.4% ರಷ್ಟಿದೆ. 2. ನಿವ್ವಳ ನೀರಾವರಿಯಾಗುವ ಪ್ರದೇಶವು ಸುಮಾರು

2.38 ಮಿ.ಹೆಕ್ಟೇರ್ ಆಗಿದ್ದು, ಅದು ಒಟ್ಟು ಕೃಷಿ ಪ್ರದೇಶದ 24% ರಷ್ಟಿದೆ. .

3. ರಾಜ್ಯದ ಮುಖ್ಯ ಕೃಷಿ ಬೆಳೆಗಳೆಂದರೆ ಭತ್ತ, ಜವೆ ಗೋಧಿ, ಮುಸುಕಿನ ಜೋಳ, ಕಡಲೆ ಕಾಳು, ಕಡಲೆ ಬೀಜ ( ಶೇಂಗಾ ಬೀಜ), ರಾಗಿ (finger millet), ಬಿಳಿ ಜೋಳ ( Sorghum), ಸಜ್ಜೆ (pearl millet), ತೊಗರಿ (pigeon pea), ಸೂರ್ಯಕಾಂತಿ, ಹಾಗೂ ಕುಸುಬೆ(ಸ್ಯಾಫ್ಲವರ್)

ಕರ್ನಾಟಕದ ಕೃಷಿ ಹವಾಮಾನದ ವಲಯಗಳು - Agro climatic zones of Karnataka.

ರಾಜ್ಯವನ್ನು ಹತ್ತು ಕೃಷಿ- ಹವಾಮಾನ ವಲಯಗಳಾಗಿ ವಿಭಜಿಸಲಾಗಿದೆ. ಅವುಗಳು:

ವಲಯ-1: ಆಗ್ನೇಯ ಬದಲಾವಣೆಯ ವಲಯ,

ವಲಯ-2: ಆಗ್ನೇಯ ಒಣ ವಲಯ,

ವಲಯ-3: ಉತ್ತರದ ಒಣ ವಲಯ,

ವಲಯ-4: ಮಧ್ಯಭಾಗದ ಒಣ ವಲಯ,

ವಲಯ-5: ಪೂರ್ವದ ಒಣ ವಲಯ,

ವಲಯ-6: ದಕ್ಷಿಣದ ಒಣ ವಲಯ,

ವಲಯ-7: ದಕ್ಷಿಣದ ಬದಲಾವಣೆಯ ವಲಯ,

ವಲಯ-8: ಉತ್ತರದ ಬದಲಾವಣೆಯ ವಲಯ ,

ವಲಯ-9: ಬೆಟ್ಟ ವಲಯ,

ವಲಯ-10: ಕರಾವಳಿ ವಲಯ.

ಕರ್ನಾಟಕದ ಭೂಗೋಳ ಹಾಗೂ ಹವಾಮಾನ - Geography and Climate of Karnataka

1. ಕರ್ನಾಟಕ ರಾಜ್ಯವು 11°31' ಮತ್ತು 18°45' ಉತ್ತರ ಅಕ್ಷಾಂಶ ಮತ್ತು 74°12' ಮತ್ತು 78°40' ಪೂರ್ವ ರೇಖಾಂಶದ ನಡುವೆ, ದಕ್ಷಿಣ ಭಾರತದ ಪಶ್ಚಿಮ-ಮಧ್ಯಭಾಗದಲ್ಲಿ ನಿಂತಿದೆ.

2. ರಾಜ್ಯದ ಭೌಗೋಳಿಕ ವಿಸ್ತೀರ್ಣವು ಸುಮಾರು 1.91 ಲಕ್ಷ ಚದರ ಕಿ.ಮೀ. ಆಗಿದ್ದು ಇದು ದೇಶದ ಅತಿ ದೊಡ ರಾಜ್ಯಗಳಲ್ಲಿ ಎಂಟನೆಯ ಸ್ಥಾನ ಪಡೆದಿದೆ. ಇದರ ಕರಾವಳಿ ಪ್ರದೇಶ ಸುಮಾರು 3000 ಕಿ.ಮೀ ಉದ್ದಕ್ಕೂ ಚಾಚಿದ್ದು, ಮಂಗಳೂರು ಮತ್ತು ಕಾರವಾರಗಳಲ್ಲಿ ಬಂದರು ವ್ಯವಸ್ಥೆಯೂ ಇದೆ.

3. ಕರ್ನಾಟಕದ ಹವಾಗುಣ ಉಷ್ಣವಲಯದ್ದಾಗಿದೆ. ಇಲ್ಲಿ ದಕ್ಷಿಣ- ಪಶ್ಚಿಮ ಹಾಗೂ ಉತ್ತರ-ಪೂರ್ವ ಮಾನ್ಸೂನ್ ಮಾರುತಗಳ ಮೂಲಕ ಹೆಚ್ಚಾಗಿ ಮಳೆಯಾಗುತ್ತದೆ. ಛಳಿ ಹಾಗೂ ಬೇಸಿಗೆ ಕಾಲದಲ್ಲೂ ಅಲ್ಪ ಪ್ರಮಾಣದ ಮಳೆ ಬೀಳುತ್ತದೆ.

4. ರಾಜ್ಯದಲ್ಲಿ ಸುಮಾರು 1354.7 ಮಿಮೀ. ನಷ್ಟು ವಾರ್ಷಿಕ ಸರಾಸರಿ ಮಳೆಯಾಗುತ್ತದೆ. ಕನಿಷ್ಠ 552.8 ಮೀ. ಹಾಗೂ ಗರಿಷ್ಠ 3932.4 ಮಿ.ಮೀ. ಮಳೆ ಬೀಳುತ್ತದೆ. ತಾಪಮಾನವು 24°- 39°ಸೆ ರಷ್ಟು ವ್ಯತ್ಯಾಸವಾಗುತ್ತದೆ.

02
Sep

ಕರ್ನಾಟಕ - Karnataka

ಕರ್ನಾಟಕ - Karnataka

1. ರೂಪುಗೊಂಡ ದಿನಾಂಕ: 15, ಆಗೋಸ್ಟ್ 1947

2. ವಿಸ್ತೀರ್ಣ: 1,91,791 ಚದರ ಕಿ.ಮೀ.

3. ರಾಜಧಾನಿ: ಬೆಂಗಳೂರು

4. ಜನಸಂಖ್ಯೆ: 52,850,562

5. ಒಟ್ಟು ಜಿಲ್ಲೆಗಳು: 29

6. ಗ್ರಾಮಗಳು: 27,481

7. ಪಟ್ಟಣಗಳು: 270

8. ಪ್ರಸ್ತುತ ಬೆಲೆಗೆ ಸರಿಯಾಗಿ ವ್ಯಕ್ತಿಗತ ಆದಾಯ |2005-2006): Rs 27,291

Copy rights | Disclaimer | RKMP Policies