Best Viewed in Mozilla Firefox, Google Chrome

KRH-2 ಹೈಬ್ರಿಡ್ ಫ್ರಂಟ್ಲೈನ್ ಪ್ರದರ್ಶನಗಳು

PrintPrintSend to friendSend to friend

KRH-2 ಹೈಬ್ರಿಡ್ ಫ್ರಂಟ್ಲೈನ್ ಪ್ರದರ್ಶನಗಳು

ಮಂಡ್ಯದ ರೀಜನಲ್ ರಿಸರ್ಚ್ ಸ್ಟೇಶನ್ ನ ವಿಸ್ತರಣಾ ಮುಖಂಡರಾದ ಡಾ. ನರಸಿಂಹಯ್ಯ ರವರು 2001 ರಲ್ಲಿ ಕೆ ಅರ್ ಹೆಚ್-2 ಮಿಶ್ರ ತಳಿ ಭತ್ತವನ್ನು ಮುಂಚೂಣಿಯ ಪ್ರಾತ್ಯಕ್ಷಿಕ ಬೆಳೆಯಾಗಿ ಬೆಳೆಯುವ ಕುರಿತು ಪ್ರಸ್ತಾವನೆಯನ್ನು ಅವರ ಮುಂದಿಡುವ ವರೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಲೂಕಿನ ಶ್ರೀ ಜಯರಾಮರು ಮಿಶ್ರ ತಳಿ ಭತ್ತದ ಕುರಿತು ಏನೇನೂ ತಿಳಿದಿರಲಿಲ್ಲ. ಶ್ರೀ ಜಯರಾಮರು ಮಧ್ಯ ಮಟ್ಟದ ರೈತರಾಗಿದ್ದರೂ, ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿದ್ದುದರಿಂದಾಗಿ, ಅವರ ಗದ್ದೆಯನ್ನು ಡಾ.ನರಸಿಂಹಯ್ಯರವರು ಪ್ರಾತ್ಯಕ್ಷಿಕೆಗಾಗಿ ಆಯ್ಕೆ ಮಾಡಿಕೊಂಡರು. ಶ್ರೀ ಜಯರಾಮರು ಒಬ್ಬ ಆದರ್ಷ ರೈತರಾಗಿದ್ದು, ಆತ ಈ ಪ್ರಯೋಗ ಯಶಸ್ವಿಯಾಗಲು ಬೇಕಾದ ಎಲ್ಲಾ ಅಗತ್ಯಗಳನ್ನೂ ಚಾಚೂ ತಪ್ಪದೆ ಪಾಲಿಸಿದರು. ಆತ ಹೊಚ್ಚ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲವನ್ನು ಹೊಂದಿದವರಾಗಿದ್ದರು. ಕರ್ನಾಟಕ ರಾಜ್ಯದ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಅಡಕ ಜಮೀನಿನ ಪ್ರಾತ್ಯಕ್ಷಿಕೆಗೆ ಆಯ್ಕೆಯಾದ ಇಂತಹ 55 ರೈತರಲ್ಲಿ ಅವರೂ ಒಬ್ಬರು. ಜಯರಾಮರ ಗದ್ದೆಯಲ್ಲಿ, ಪರೀಕ್ಷಾತ್ಮಕ ತಳಿಯಾದ ಮಂಡ್ಯ ಜಯದ 1.0 ಹೆಕ್ಟೇರ್ ಬೆಳೆಯ ಪಕ್ಕದಲ್ಲೇ ಕೆ ಆರ್ ಹೆಚ್-2 ಮಿಶ್ರ ತಳಿ ಭತ್ತ ವನ್ನು ಬೆಳೆಯಲಾಯಿತು. ಪ್ರಬುದ್ಧತೆಗೆ ಬಂದಾಗ, ಇಳುವರಿಯ ಸರಿಯಾದ ಅಂದಾಜು ಮಾಡಲು, ಅಡಕ ಜಮೀನಿನ ಮಿಶ್ರ ತಳಿಯ ಪ್ರಾತ್ಯಕ್ಷಕೆಯನ್ನು ಅಳವಡಿಸಿದ ರೈತರೊಳಗೆ ಬೆಳೆ ಕೊಯಿಲು ಮಾಡುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಶ್ರೀ ಜಯರಾಮರು ಕೆ.ಆರ್. ಹೆಚ್ -2 ಹೈಬ್ರಿಡ್ ತಳಿಯ ಭತ್ತದ ಬೆಳೆಯಿಂದ 12.16 ಟನ್/ಹೆ ಇಳುವರಿ ಪಡೆದರೆ ಪರೀಕ್ಷಾತ್ಮಕವಾಗಿ ಬೆಳೆದ ಮಂಡ್ಯ ಜಯಾ ತಳಿಯಿಂದ 9.89 ಟ/ಹೆ ಇಳುವರಿ ಪಡೆದರು. ಹೀಗೆ, ಮಿಶ್ರ ತಳಿ ಬೆಳೆದುದರಿಂದ ಅವರಿಗೆ ಇಳುವರಿಯಲ್ಲಿ 2.27 ಟ/ಹೆ ಲಾಭ ದೊರಕಿತು. ಜಯಾ ಹಾಗೂ ಮಿಶ್ರ ತಳಿಯ ಉತ್ಪನ್ನಗಳೆರಡನ್ನೂ ಮಾರುಕಟ್ಟೆಯಲ್ಲಿ ಪ್ರತ ಕ್ವಿಂಟಾಲ್ (100 ಕೆ.ಜಿ.) ಗೆ ರೂ. 550/-ರಂತೆ ಮಾರಲಾಯಿತು. ಇದರಿಂದ ಮಿಶ್ರ ತಳಿ ಭತ್ತ ಬೆಳೆದ ಪ್ರತಿ ಹೆಕ್ಟೇರಿಗೆ ರೂ. 12,485/- ನಿವ್ವಳ ಲಾಭ ದೊರೆತಂತಾಯಿತು. ಮಿಶ್ರ ತಳ ಬದ ಬೆಲೆ ಪ್ರತ ಹೆಕ್ಟರಿಗೆ ರೂ. 1500/- ತಗಲಿದರೆ, ಸ್ಥಳೀಯವಾಗಿ ದೊರೆಯುವ ತಳಿಗೆ ಹಕ್ಟೇರಿಗ ರೂ. 500/- ವೆಚ್ಚ ತಗಲುತ್ತದೆ. ಆದುದರಿಂದ, ಮಿಶ್ರ ತಳಿ ಬೆಳೆದುದರಿಂದ ಶ್ರೀ. ಜಯರಾಮರಿಗೆ ರೂ.11,500/- ಹೆಚ್ಚುವರಿ ಆದಾಯ ದೊರಕಿತು. ಅವರು ಮುಂದಿನ ಖಾರಿಫ್ ಹಂಗಾಮಿನಲ್ಲಿ ತನ್ನಲ್ಲಿರು 2 ಹೆಕ್ಟೇರ್ ಜಮೀನಿನಲ್ಲಿ ಕೆ.ಆರ್. ಹೆಚ್ -2 ಮಿಶ್ರ ತಳಿಯನ್ನು ಬೆಳೆಸುವ ಆಶಯ ವ್ಯಕ್ತ ಪಡಿಸಿದ್ದಾರೆ. ಇದರಿಂದ ಪ್ರೇರೇಪಿತರಾದ ತಾಲೂಕಿನ ಹಲವು ರೈತರು ಮುಂದಿನ ಬೆಳೆಯ ಅವಧಿಯಲ್ಲಿ ಕೆ.ಆರ್. ಹೆಚ್ -2 ಮಿಶ್ರ ತಳಿ ಭತ್ತವನ್ನು ಬೆಳೆಯುವ ಹಂಬಲವನ್ನು ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಜಯರಾಮರ ಮಿಶ್ರ ತಳಿಯೊಂದಿಗಿನ ಅನುಭವ ಮತ್ತು ಯಶಸ್ಸು ರಾಜ್ಯದ ಇತರ ರೈತರಿಗೂ ಮಾದರಿಯಾಗಿದೆ.

File Courtesy: 
ZARS, Mandya
Related Terms: Farmers InnovationFIS
Copy rights | Disclaimer | RKMP Policies