Best Viewed in Mozilla Firefox, Google Chrome

ಕೆ ಆರ್ ಹೆಚ್ -2 - Variety -KRH-2

PrintPrintSend to friendSend to friend

ಕೆ ಆರ್ ಹೆಚ್ -2 - Variety -KRH-2

ಕೆ. ಆರ್ ಹೆಚ್-2 ಇನ್ನೊಂದು ಮಧ್ಯಮ ಅವಧಿಯ, 130 ದಿನಗಳಲ್ಲಿ ಕಟಾವಿಗೆ ಬರುವ ಸಂಕರ ತಳಿಯನ್ನು 1996 ರಲ್ಲಿ ರಾಜ್ಯಕ್ಕೆ ಬಿಡುಗಡೆ ಮಾಡಲಾಯಿತು. ಕರ್ನಾಟಕದಲ್ಲೇ ಅತಿ ಹೆಚ್ಚು ಇಳುವರಿ ನೀಡುವ ಜಯ ತಳಿಯ 6 ಟನ್/ಹೆ. ಇಳುವರಿಗೆ ಹೋಲಿಸಿದಾಗ, ಕೆಆರ್ ಹೆಚ್-2 ಸರಾಸರಿ 7.3 ಟನ್/ಹೆ. ಇಳುವರಿ ನೀಡಿತು. ಈ ತಳಿಯನ್ನು ಐಆರ್ ಆರ್ ಐ ಯ ಸಿಎಮ್ ಎಸ್ ಸಂತತಿಯ ಐ.ಆರ್ 58025ಎ ಯನ್ನು ಸ್ಥಳೀಯವಾಗಿ ವೃದ್ಧಿಪಡಿಸಿದ ಕೆ ಎಂ ಆರ್ -3ಆರ್ ಸಂತತಿಯೊಂದಿಗೆ ಸಂಯೋಜನೆ ಮಾಡಿ ಪಡಯಲಾಯಿತು. ಈ ವೃದ್ಧಿಪಡಿಸಿದ ಸಂಕರ ತಳಿಯನ್ನು ದೇಶದ ಮೂಲೆ ಮೂಲೆಗಳಲ್ಲಿ ಮುಂಗಾರು 2000 ಕಾಲದಲ್ಲಿ ಬಿತ್ತಿ ಬೆಳೆದಾಗ ಅದು ಪ್ರಯೋಗ ನಡೆಸಿದ ಸಾಧಾರಣ ಎಲ್ಲಾ ಸ್ಥಳಗಳಲ್ಲೂ ದೇಶದಲ್ಲಿ ಲಭ್ಯವಿರುವ, ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಎಲ್ಲಾ ತಳಿಗಳಿಗಿಂತ ಹೆಚ್ಚು ಇಳುವರಿ ನೀಡಿತು. ಅದನ್ನು ಇನ್ನೂ ಹೆಚ್ಚಿನ ಪರೀಕ್ಷೆಗೊಳಪಡಿಸಿದಾಗ ಅದು ಪರೀಕ್ಷಿಸಿದ ಎಲ್ಲ ಪ್ರದೇಶಗಳಲ್ಲೂ ಅಲ್ಲಿನ ಸ್ಥಳೀಯ ತಳಿಗಳಿಂದ 1.2 to 1.5 ಟ/ಹೆ. ನಷ್ಟು ಅಧಕ ಇಳುವರಿ ನೀಡಿದೆ. ಆದುದರಿಂದ ಈ ತಳಿಯನ್ನು ರಾಷ್ಟ್ರ ಮಟ್ಟದಲ್ಲಿ 2002 ರಲ್ಲಿ ಪೂರ್ವ, ಪಶ್ಚಿಮ, ಹಾಗೂ ದಕ್ಷಿಣ ಭಾಗಗಳಿಗೆಂದು ಬಿಡುಗಡೆ ಮಾಡಲಾಯಿತು.

File Courtesy: 
ZARS, Mandya
Copy rights | Disclaimer | RKMP Policies