Best Viewed in Mozilla Firefox, Google Chrome

ತಳಿ ಕೆ ಆರ್ ಹೆಚ್-1 - Variety -KRH-1

PrintPrintSend to friendSend to friend

ತಳಿ ಕೆ ಆರ್ ಹೆಚ್-1 - Variety -KRH-1

ಕೆ ಆರ್ ಹೆಚ್ -1ತಳಿಯು ಕಡಿಮೆ ಅವಧಿಯ, ಸಂಕರಣ ತಳಿಯಾಗಿದ್ದು, ಅದು 120 ದಿನಗಳಲ್ಲಿ ಪ್ರಬುದ್ಧತೆಗೆ ಬರುತ್ತದೆ. ಈ ತಳಿಯನ್ನು ಕರ್ನಾಟಕ ರಾಜ್ಯಕ್ಕೆಂದು 1994ರಲ್ಲಿ ಬಿಡುಗಡೆ ಮಾಡಲಾಯಿತು. ಅದು ಸ್ಥಳೀಯ ತಳಿಯಾದ ಮಂಗಳದಲ್ಲಿ ಬರುವ 5.0 ಟ/ಹೆ ಗಿಂತ ಹೆಚ್ಚು, ಅಂದರೆ, ಸರಾಸರಿ 6.3 ಟನ್/ಹೆ ಇಳುವರಿ ಕೊಡುತ್ತದೆ. ಇದು ಸ್ಥಳೀಯ ತಳಿ ಯ ಇಳುವರಿಗಿಂತ 1.3 ಟನ್/ಹೆ ನಷ್ಟು ಹೆಚ್ಚಿದೆ. ಈ ತಳಿಯನ್ನು ಬೆಳೆಸುವ ವಿಧಾನವು ಪ್ರಮಾಣೀಕರಿಸಲ್ಪಟ್ಟಿದೆ. ಮುಖ್ಯ ಅಂಶಗಳೆಂದರೆ, ಒಂದು ದಿನ್ನೆಯಲ್ಲಿ ಒಂದು ಸಸ್ಯವನ್ನು ನಾಟಿ ಮಾಡುವುದು ಮತ್ತು ಸಸಿಗಳ ನಡುವೆ 20 x 10 ಸೆಂ.ಮೀ ಮತ್ತು 15 x 10 ಸೆಂ. ಮೀ ಅಂತರ ಕಾಪಾಡಿಕೊಳ್ಳುವುದು; ಸಾರಜನಕ ರಂಜಕ ಮತ್ತು ಪೊಟ್ಯಾಶ್ ಗಳನ್ನು 100:50:50 ಕೆ.ಜಿ/ಹೆ. ಪ್ರಮಾಣದಲ್ಲಿ ಒದಗಿಸವುದು, ಹಾಗೂ ಇತರ ಅಧಿಕ ಇಳುವರಿ ನೀಡುವ ತಳಿಗಳಿಗೆ ಶಿಫಾರಸು ಮಾಡಿದ ಪದ್ಧತಿಗಳನ್ನು ಅನುಸರಿಸುವುದು.

File Courtesy: 
ZARS, Mandya
Copy rights | Disclaimer | RKMP Policies