ಕೂರಿಗೆ ಬಳಕೆ ಖರ್ಚು ಉಳಿಕೆ
ಹೊಸ ಕೂರಿಗೆಯಲ್ಲಿ ರೈತರ ಆಸಕ್ತಿ
ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ರಾಯಚೂರು ಜಿಲ್ಲೆಯ ಜೀವನಾಡಿ. ಈ ನದಿಗಳ ನೀರನ್ನು ಬಳಸಿ ರೈತರು ವರ್ಷದಲ್ಲಿ ಎರಡು ಭತ್ತದ ಬೆಳೆ ಬೆಳೆಯುತ್ತಾರೆ. ಆದರೆ, ಈ ವರ್ಷ ಎರಡನೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಜಲಾಶಯದಲ್ಲಿ ನೀರಿಲ್ಲ.ಮಲೆನಾಡು ಮತ್ತು ನೀರಾವರಿ ಪ್ರದೇಶಗಳಲ್ಲಿ ಭತ್ತದ ನಾಟಿ ಜತೆಗೆ ಬಿತ್ತುವುದೂ ಹೆಚ್ಚು ಪ್ರಚಲಿತದಲ್ಲಿದೆ. ಆದರೆ ರಾಯಚೂರು ಜಿಲ್ಲೆಯ ರೈತರು ನೀರು ಇಲ್ಲದೆ ಭತ್ತ ಬೆಳೆಯುವುದೇ ಇಲ್ಲ.
ಅವರ ಈ ಸಂದಿಗ್ಧ ಅರಿತ ರಾಯಚೂರು ಕೃಷಿ ವಿವಿ ಉಸ್ತುವಾರಿ ಕುಲಪತಿಗಳಾದ ಎಸ್.ಜಿ. ಪಾಟೀಲ ಅವರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಹಕಾರದೊಂದಿಗೆ ಮಾನ್ವಿ ತಾಲೂಕಿನ ಶಿರವಾರ ಗ್ರಾಮದ ಶರಣಪ್ಪ ಖಾನಾಪುರ ಇವರ ಹೊಲದಲ್ಲಿ `ಶೂನ್ಯ ಬೇಸಾಯ ಕೂರಿಗೆ`ಯಲ್ಲಿ ಬಿತ್ತುವ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದರು. ಇದನ್ನು ನೋಡಲು ಆಸಕ್ತ ರ