Best Viewed in Mozilla Firefox, Google Chrome

      ಸುಧಾರಿತ ಭತ್ತದ ತಳಿಗಳು

   ಕರ್ನಾಟಕ (ದಕ್ಷಿಣ ಮೈದಾನ ಪ್ರದೇಶ)
ಭತ್ತದ ತಳಿ ಅಬಿವೃದ್ಧಿ ವಿಭಾಗ

ವಲಯ ಕೃಷಿ ಸಂಶೋಧನಾ ಕೇಂದ್ರ

ವಿ.ಸಿ.ಫಾರಂ, ಮಂಡ್ಯ-571405

 

                   ಭತ್ತವು ಕರ್ನಾಟಕ ರಾಜ್ಯದ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿರುವ ಒಂದು ಪ್ರಮುಖ ಆಹಾರ ಬೆಳೆ. ಅಚ್ಚುಕಟ್ಟು ಪ್ರದೇಶಗಳಲ್ಲಿ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ಈ ಬೆಳೆಯನ್ನು ಕೆರೆ, ಬಾವಿ ಹಾಗೂ ಮಳೆ ಆಶ್ರಯಗಳಲ್ಲೂ ಕಾಣಬಹುದು.  ರಾಜ್ಯದ ಸುಮಾರು 13.28 ಲಕ್ಷ ಹೆಕ್ಟೇರುಗಳಲ್ಲಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತಿದ್ದು ವಾರ್ಷಿಕ ಸುಮಾರು 38.56 ಲಕ್ಷ ಟನ್‍ಗಳಷ್ಟು ಭತ್ತವನ್ನು ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯದ ದಕ್ಷಿ

 ಭತ್ತದ ಕೀಟಪೀಡೆಗಳ ಸಮಗ್ರ ನಿರ್ವಹಣೆ
ಭತ್ತ ಕರ್ನಾಟಕ ರಾಜ್ಯದ ಬಹು ಮುಖ್ಯ ಆಹಾರ ಬೆಳೆ.  ರಾಜ್ಯದಲ್ಲಿ ಸುಮಾರು 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ  ಬೆಳೆಯಲಾಗುತ್ತಿದೆ.  ಭತ್ತಕ್ಕೆ ಕರ್ನಾಟಕದಾದ್ಯಂತ 24 ಹೆಚ್ಚು ಕೀಟಗಳು ಕಂಡುಬಂದರೂ, ಕೆಲವೇ ಕೀಟಗಳು ಪ್ರಮುಖ ಪೀಡೆಗಳಾಗಿವೆ. ಈ ಬೆಳೆಗೆ ಬಿತ್ತನೆ ಮಾಡಿದಾಗಿನಿಂದ ಹಿಡಿದು ಕಟಾವಾಗುವವರೆಗೂ ಒಂದಲ್ಲ ಒಂದು ರೀತಿಯ ಕೀಟ ಬಾದೆ ಇದ್ದೆ ಇರುತ್ತದೆ. ಕೀಟಗಳ ಭಾದೆ ಸಸಿ ಮಡಿಯಲ್ಲಿರಬಹುದು. ತೆಂಡೆಯೊಡೆಯುವ ಸಮಯದಲ್ಲಿರಬಹುದು ಅಥವಾ ಕಾಳು ಕಟ್ಟುವ ಸಮಯದಲ್ಲಿರಬಹುದು. ಆದ್ದರಿಂದ  ಈ ಕೀಟಗಳ  ಹಾವಳಿಯನ್ನು ಅರಿತು ಸಮರ್ಪಕ ಹತೋಟಿ ಕ್ರಮಗಳನ್ನು  ತೆಗೆದುಕೊಳ್ಳುವುದು ಅತ್ಯವಶ್ಯ.

ಭತ್ತದ ಕೀಟಗಳನ್ನು ಬೆಳೆಯನ್ನು ಬಾಧಿಸುವ ಹಂತದ ಆನುಗುಣವಾಗಿ ಮುಖ್ಯವಾಗಿ ಮೂರು ಗುಂಪುಗಳಾಗಿ ವಿಂಗಡಿಸಬಹುದು

1. ಸಸಿ ಮಡಿಯಲ್ಲಿ ಬರುವ ಕೀಟಗಳು : ಥ್ರಿಪ್ಸ್ ನುಸಿ, ಗರಿಜಿಗಿ ಹುಳು ಹಾಗೂ ಹಳದಿ ಕಾಂಡ ಕೊರಕ.
2. ಸಸ್ಯ ಬೆಳವಣಿಗೆ / ತೆಂಡೆಯೊಡೆಯುವ ಹ0ತದಿ0ದ ಕ

 ಎಲೆ ಕವಚ ಕೊಳೆ ರೋಗ, ಕುತ್ತಿಗೆ ಬೆಂಕಿ ರೋಗ ಹಾಗೂ ಕಂದು ಜಿಗಿ ಹುಳುಗಳ ಹತೋಟಿ ಕ್ರಮಗಳು

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ನಂಜನಗೂಡು ಹಾಗೂ ಟಿ.ನರಸೀಪುರ ಭಾಗದಲ್ಲಿ ಬೆಳೆದಿರುವ ಭತ್ತದ ಗದ್ದೆಗಳಲ್ಲಿ ಎಲೆಗಳ ಮೇಲೆ ಕಂದು ಮಚ್ಚೆಗಳು ಕಂಡು ಬಂದಿದ್ದು, ಎಲೆಗಳು ಕೆಂಪು ಹಳದಿ ಬಣ್ಣಕ್ಕೆ ತಿರುಗಿದ್ದು, ಒಣಗಿದಂತೆ ಕಾಣುತ್ತಿದೆ.  ಇದು ಕವಚ ಕೊಳೆ ರೋಗದ ಚಿಹ್ನೆಯಾಗಿದೆ.  ಇಂತಹ ಚಿಹ್ನೆ ಕಂಡು ಬಂದಾಗ ಕೆಳಗೆ ಸೂಚಿಸಿರುವ ನಿರ್ವಹಣಾ ಕ್ರಮಗಳನ್ನು ರೈತರು ಕೈಗೊಳ್ಳಬೇಕಾಗುತ್ತದೆ.
• ತಾಕಿನಲ್ಲಿ ಅವಶ್ಯಕತೆಗಿಂತ ಹೆಚ್ಚಾಗಿರುವ ನೀರನ್ನು ಬಸಿಯುವುದು
 • ಬೆಳೆಗೆ  ಪೆÇ್ರೀಪಿಕೋನಾಝೋಲ್ ಅಥವಾ ಹೆಕ್ಸಾಕೋನಾಝೋಲಾ ಔಷಧಿಯನ್ನು 1 ಲೀ ನೀರಿಗೆ 1 ಮಿ.ಲೀ. ಪ್ರಮಾಣದಲ್ಲಿ ಬೆರೆಸಿ ಗಿಡಗಳು ಸಂಪೂರ್ಣವಾಗಿ ನೆನೆಯುವಂತೆ ಸಿಂಪಡಿಸಬೇಕು. ಎಕರೆಗೆ 150 ರಿಂದ 200 ಲೀ ಸಿಂಪರಣಾ ದ್ರಾವಣ ಬೇಕಾಗುತ್ತದೆ. 
 • ಕುತ್ತಿಗೆ ಬೆಂಕಿ ರೋಗದ ಬಾಧೆಗೆ ಮುನ್ನೆಚ್ಚರಿಕೆಯಾಗಿ ಟ್ರೈಸೈಕ್ಲೋಝೋಲ್ ಔಷಧಿಯನ್ನು 6 ಗ್ರಾಂ ಪ್ರತಿ 10
10
Aug

Aerobic Rice Variety- MAS 946-1 (in Kannada)

Aerobic Rice Variety- MAS 946-1 (Sharada)

For English- Click Here
03
Sep

ಬೆಳೆ ನಿರ್ವಹಣೆ - Crop Management

ಬೆಳೆ ನಿರ್ವಹಣೆ - Crop Management

1.ಸಸಿಗಳು ಉತ್ತಮವಾಗಿ ಬೇರೂರಲು 30-35 ದಿನಗಳ ಸಸಿಗಳನ್ನು ನಾಟಿ ಮಾಡುವುದು ಉತ್ತಮ.

2. ಒಂದೊಂದು ಮುರಿಗೆ 3-4ಸಸಿಗಳನ್ನು ನಾಟಿಮಾಡಿ ಮತ್ತು ಸಸಿಗಳ ಸಾಂದ್ರತೆ ಹಿತಕರವಾಗಿರಲಿ.

3. ಹಿತಕರ ಸಸ್ಯ ಸಾಂದ್ರತೆಯನ್ನು ಸಾಧಿಸಲು ಸಸಿಗಳನ್ನು 15 ಸೆಂ.ಮೀ ಸಾಲಿನಲ್ಲಿ 10 ಸೆಂ.ಮೀ ಅಂತರದಲ್ಲಿ ನಾಟಿಮಾಡಿ

03
Sep

ಪ್ರಬೇಧ ನಿರ್ವಹಣೆ - Varietal management

ಪ್ರಬೇಧ ನಿರ್ವಹಣೆ - Varietal management

1. ಸವಳು/ ಉಪ್ಪು ನೀರನ್ನು ಸಹಿಸುವ ಭತ್ತದ ತಳಿಯ ಆಯ್ಕೆ: ಪ್ರಕಾಶ್‌,ರಾಸಿ, ಮಂಗಳಾಐಆರ್‌--30864 ಮತ್ತು ವಿಕಾಸ.

2. ಪೌಷ್ಟಿಕತೆಯ ಬೇಡಿಕೆ ಪೂರೈಸಲು 25% ಹೆಚ್ಚು ಸಾರಜನಕ & ರಂಜಕ ರಸಹೊಬ್ಬರ ಗಳನ್ನು ಹಾಕಿರಿ.

3. ಪುನರ್‌ ಪಡೆಯುವ ಕ್ರಮಗಳಾದ ಜಿಪ್ಸಂ ಸೇರಿಸುವುದು ಮತ್ತು ಇಂಗುಕಾಲುವೆ ತೋಡಲು ಕ್ರಮ ಕೈಗೊಳ್ಳಿ

4. ಸಾಕಷ್ಟು ಪ್ರಮಾಣದ ಸಾವಯವ ಗೊಬ್ಬರ ಹಾಕಿ ಮಣ್ಣಿನ ಭೌತಿಕ ಗುಣ ಸುಧಾರಿಸಿ.

5. ಹಸಿರೆಲೆ ಗೊಬ್ಬರ ಹಾಕಿ ಉದಾ: ಸೆಣಬು (Dhaincha, Sunhemp ) ಇತ್ಯಾದಿ.,

6. ಉತ್ತಮ ಭೂಮಿಯ ತಯಾರಿ ಮತ್ತು ಸಮತಟ್ಟುಮಾಡುವುದರಿಂದ ಅದರ ಪೌಷ್ಟಿಕತೆಯ ಅಂಶ ಹೆಚ್ಚಳವಾಗುಗುವುದು

7. ಒಂದು ಹೆಕ್ಟೇರಿಗೆ 40ಕೆಜಿ ಸತುವಿನ ಸಲ್ಫೇಟ್‌ ಅಥವಾ ಸತುವಿನ ಅಂಶ ಹೆಚ್ಚಿರುವ ಕಾಂಪೋಸ್ಟ 250 ಕೆ.ಜಿ / ಹೆಕ್ಟೆರ್‌ಗೆ ಹಾಕಬಹುದು.

ಸವಳು ಭೂಮಿಯಲ್ಲಿ ಕೃಷಿ - Paddy cultivation under saline / sodic soils

1. ಭೂಮಿಯು ಸೋಡಿಯಂ ಲವಣಗಳಾದ ಸಲ್ಫೇಟ ಮತ್ತು ಕ್ಲೋರೈಡ್‌ಗಳ ಸಂಗ್ರಹದಿಂದ ಬಂಜರಾಗುವು ಆಗುವುದು. ಆಗ ಮಣ್ಣಿನ ರಸಸಾರವು/ ಪಿ ಎಚ್‌ ಮೌಲ್ಯವು 7.5 - 8.5ರವರೆಗೆ ಇರುವುದು. ಇದರ ವಿದ್ಯುತ್ ವಾಹಕತ್ವವು 15dSm-l. ಕಡಿಮೆ ಇರುವುದು.

2. ಸೋಡಿಯಂ ಕರ್ಬೊನೇಟ್‌ ಮತ್ತು ಬೈಕಾರ್ಬೊನೇಟ್ ಗಳಿಂದ ಭೂಮಿ ಸವಳು ಬಿಡುವುದು . ಆಗ ಪಿಎಚ್‌ ( pH) >8.5 ಇರುವುದು ಮತ್ತು EC >15 dSm-l. ಇರುವುದು

03
Sep

ರೈಸ್ ಹಿಸ್ಪಾ - Rice hispa

ರೈಸ್ ಹಿಸ್ಪಾ - Rice hispa


ವೈಜ್ಞಾನಿಕ ಹೆಸರು - ಡೈಕ್ಲಡಿಸ್ಪಾ ಆರ್ಮಿಜೆರಾ

ಕುಟುಂಬ - ಕ್ರೈಸೊಮೆಲಿಡೇ

ಆದೇಶ - ಕೊಲಿಯಾಪ್ಟೆರಾ

ರೈಸ್‌ ಹಿಸ್ಪಾದ ಧಾಳಿಯ ಲಕ್ಷಣ - Symptom of attack Rice hispa

ಲಾರ್ವವು ಎಲೆಯ ಭಾಗವನ್ನು ಕೊರೆದಿರುವುದು ಎದ್ದುಕಾಣುವುದು. ಎಲೆಯ ಮೇಲೆ ಸಮಾಂತರ ಬಿಳಿಗೆರೆಗಳು ಕಂಡುಬರುವವು .

ರೈಸ್‌ ಹಿಸ್ಪಾ ದ ಹಾನಿಯ ಸ್ವರೂಪ - Nature of damage of Rice hispa

ಲಾರ್ವವು ಎಲೆಯ ಅಂಚನ್ನು ಕೊರೆಯುವುದು.ಅಲ್ಲಿನ ಹಸಿರು ಅಂಗಾಶವನ್ನು ತಿನ್ನುವುದು. ಪ್ರೌಢ ಕೀಟವೂ ಹಸಿರು ಅಂಗಾಂಶವನ್ನೆ ತಿನ್ನುವುದು. ಅವು ಎಳೆಯ ಎಲೆಗಳ ಮೆಲ್ಭಾಗವನ್ನೆ ಕೆರೆದು ತಿನ್ನುವುದರಿಂದ ಸಸ್ಯಗಳು ಎಳೆಯವಿದ್ದಾಗಲೆ ತೊಂದರೆಗೆ ಒಳಗಾಗುವವು.

ರೈಸ್‌ ಹಿಸ್ಪಾದ ಜೀವನ ಹಂತಗಳು - Life stages of Rice hispa

ಮೊಟ್ಟೆಗಳು : ಎಲೆಯ ಎಲೆಯ ತುದಿಯಲ್ಲಿ ಕಿರು ಸೀಳಿನಲ್ಲಿ ಮೊಟ್ಟೆ ಇಡುವವು.

ಲಾರ್ವ: ಈ ಲಾರ್ವವು ಹಳದಿಮಿಶ್ರಿತ ಬಿಳಿಬಣ್ಣದ್ದಾಗಿರುವುದು ಚಪ್ಪಟೆ ತುದಿ ಹೊಂದಿರುವುದು.ಎಲೆಯನ್ನು ಕೊರೆದು ಅಂಗಾಂಶ ತಿನ್ನುವುದು ಒಳಗೆ ಬೆಳೆದು ಕೋಶ ಕಟ್ಟು

03
Sep

ಮಿಡತೆಗಳು - Grass hoppers

ಮಿಡತೆಗಳು - Grass hoppers

ವೈಜ್ಞಾನಿಕ ಹೆಸರು - ಹೈರೊಗ್ಲಿಫಸ್‌ ಬ್ಯಾನಿಯನ್‌ ( ದೊಡ್ಡ ಮಿಡತೆ), ಆಕ್ಸ್ಯಾ ನಿಟಿಡುಲಾ( ಚಿಕ್ಕ ಮಿಡತೆ)

ಕುಟುಂಬ - ಅಕ್ರಿಡಿಡೇ

ಆದೇಶ - ಆರ್ಥೊಪ್ಟೆರಾ

ಮಿಡತೆಯ ಧಾಳಿಯ ಲಕ್ಷಣ - Symptom of attack of Grass hoppers

ಮರಿ ಹುಳುಗಳು ಮತ್ತು ವಯಸ್ಕ ಮಿಡತೆಗಳೆರಡೂ ಎಲೆಗಳನ್ನು ಅಗೆದು ತಿನ್ನುವವು.

ಮಿಡತೆಯ ಧಾಳಿಯಿಂದಾಗುವ ಹಾನಿ - Nature of damage of Grass hoppers

ಮರಿ ಹುಳುಗಳು ಮತ್ತು ವಯಸ್ಕ ಮಿಡತೆಗಳೆರಡೂ ಎಲೆಗಳನ್ನು ಅಗೆದು ತಿನ್ನುವವು ಮತ್ತು ಗಂಭೀರ ಸಂದರ್ಭದಲ್ಲಿ ಪೂರ್ಣ ಎಲೆಯನ್ನೆ ತಿಂದು ಹಾಕಬಹುದು. ಇದು ತೀವ್ರವಾದ ಹಾನಿ ಮಾಡಲು ಶಕ್ತವಾಗಿದೆ.ಇದು ಇಯರ್‌ಹೆಡ್‌ ಹಂತದಲ್ಲಿ ವಯಸ್ಕ ಮಿಡತೆಯು ಚಿಗುರನ್ನು ಕಾಂಡವನ್ನು ಬುಡವನ್ನೆ ತಿನ್ನುವವು. ಕಾಂಡದ ಮೇಲೆ ಬಿಳಿಯ ಕರೆಯನ್ನು ಬಿಡುವವು.

ಮಿಡತೆಯ ಜೀವನ ಹಂತಗಳು - Life stages of Grass hoppers

ಎಚ್‌ . ಬನಿಯನ್ ವರ್ಷಕ್ಕೆ ಒಂದೇ ಮರಿಹಾಕುವುದು. ಒ. ನಿಟಿಡುಲ ವರ್ಷದುದ್ದಕ್ಕೂ ವಂಶಾಭಿವೃದ್ಧಿ ಮಾಡುವುದು.

ಮೊಟ್ಟೆ: ಇದು ತೇವವಿರುವ ಮರಳಿನ ಮಣ್ಣಿನಲ್ಲಿ ಅಕ್ಟೋಬರ

ಎಲೆ ಸುರಳಿ/ ಮಡಿಕೆ ಕೀಟ - Leaf folder/ roller

ವೈಜ್ಞಾನಿಕ ಹೆಸರು - ಕ್ನಫಾಲೊಕ್ರೋಸಿಸ್ ಮೆಡಿನಾಲಿಸ್‌

ಆದೇಶ - ಪೈರಲಿಡೇ

ಕುಟುಂಬ - ಲೆಪಿಡೊಪ್ಟೆರಾ

ಎಲೆ ಸುರಳಿ/ ಮಡಿಕೆ ಕೀಟದ ಧಾಳಿಯ ಲಕ್ಷಣಗಳು - Symptom of attack of Leaf folder/ roller

ಎಲೆಗಳು ಉದ್ದುದ್ದವಾಗಿ ಇಲ್ಲವೆ ಅಡ್ಡಲಾಗಿ ಮಡಿಕೆಯಾಗಬಹುದು. ಅಲ್ಲಿ ನುಣುಪಾದ ಇಲ್ಲವೆ ಕೆರೆದು ಹಾಕಿದ ಭಾಗ ಕಾಣುವುದು.

ಎಲೆ ಸುರಳಿ/ ಮಡಿಕೆ ಕೀಟದ ಹಾನಿ - Nature of damage of Leaf folder/ roller

ಲಾರ್ವಾ ಮಡಿಕೆಯ ಒಳಗೆ ಇದ್ದು, ಎಲೆಯ ಹಸಿರು ಭಾಗವನ್ನು ಕೆರೆದು ಹಾಕುವುದು ಅದರ ಮೇಲೆ ಬಿಳಿ ಭಾಗವಾಗಿಸುವುದು.

ಎಲೆಸುರಳಿ/ ಮಡಿಕೆ ಕೀಟದ ಜೀವನ ಹಂತ- Life stages of Leaf folder/ roller

ಮೊಟ್ಟೆ: ಚಪ್ಪಟೆಯಾದ ದೀರ್ಘ ವೃತ್ತಾಕಾರದ ಹಳದಿಬಣ್ಣದವಾಗಿದ್ದು ಒಂದೊಂದಾಗಿ ಇಲ್ಲವೆ ಜೋಡಿಯಾಗಿ ಎಳೆ ಎಲೆಯ ಕೆಳ ಭಾಗದಲ್ಲಿರುತ್ತವೆ.

ಲಾರ್ವಾ: ಲಾರ್ವಾ ಹಳದಿಮಿಶ್ರಿತ ಹಸಿರುಬಣ್ಣ ಹೊಂದಿರುವುದು . ಅರೆ ಪಾರಕವಾಗಿರುವುದು.16-20ಮಿಮಿ ಮೀ.ಉದ್ದವಿರುವುದು.

ಗೂಡು ಹುಳು: ಅದು ಎಲೆಯ ಮಡಿಕೆಯಲ್ಲಿ ಗೂಡುಕಟ್ಟುವುದು.

ಪ್ರೌಢ ಕೀಟ : ಪ್ರೌಢ ಕೀಟ

Copy rights | Disclaimer | RKMP Policies