ಎಲೆ ಕವಚ ಕೊಳೆ ರೋಗ, ಕುತ್ತಿಗೆ ಬೆಂಕಿ ರೋಗ ಹಾಗೂ ಕಂದು ಜಿಗಿ ಹುಳುಗಳ ಹತೋಟಿ ಕ್ರಮಗಳು
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ನಂಜನಗೂಡು ಹಾಗೂ ಟಿ.ನರಸೀಪುರ ಭಾಗದಲ್ಲಿ ಬೆಳೆದಿರುವ ಭತ್ತದ ಗದ್ದೆಗಳಲ್ಲಿ ಎಲೆಗಳ ಮೇಲೆ ಕಂದು ಮಚ್ಚೆಗಳು ಕಂಡು ಬಂದಿದ್ದು, ಎಲೆಗಳು ಕೆಂಪು ಹಳದಿ ಬಣ್ಣಕ್ಕೆ ತಿರುಗಿದ್ದು, ಒಣಗಿದಂತೆ ಕಾಣುತ್ತಿದೆ. ಇದು ಕವಚ ಕೊಳೆ ರೋಗದ ಚಿಹ್ನೆಯಾಗಿದೆ. ಇಂತಹ ಚಿಹ್ನೆ ಕಂಡು ಬಂದಾಗ ಕೆಳಗೆ ಸೂಚಿಸಿರುವ ನಿರ್ವಹಣಾ ಕ್ರಮಗಳನ್ನು ರೈತರು ಕೈಗೊಳ್ಳಬೇಕಾಗುತ್ತದೆ.
• ತಾಕಿನಲ್ಲಿ ಅವಶ್ಯಕತೆಗಿಂತ ಹೆಚ್ಚಾಗಿರುವ ನೀರನ್ನು ಬಸಿಯುವುದು
• ಬೆಳೆಗೆ ಪೆÇ್ರೀಪಿಕೋನಾಝೋಲ್ ಅಥವಾ ಹೆಕ್ಸಾಕೋನಾಝೋಲಾ ಔಷಧಿಯನ್ನು 1 ಲೀ ನೀರಿಗೆ 1 ಮಿ.ಲೀ. ಪ್ರಮಾಣದಲ್ಲಿ ಬೆರೆಸಿ ಗಿಡಗಳು ಸಂಪೂರ್ಣವಾಗಿ ನೆನೆಯುವಂತೆ ಸಿಂಪಡಿಸಬೇಕು. ಎಕರೆಗೆ 150 ರಿಂದ 200 ಲೀ ಸಿಂಪರಣಾ ದ್ರಾವಣ ಬೇಕಾಗುತ್ತದೆ.
• ಕುತ್ತಿಗೆ ಬೆಂಕಿ ರೋಗದ ಬಾಧೆಗೆ ಮುನ್ನೆಚ್ಚರಿಕೆಯಾಗಿ ಟ್ರೈಸೈಕ್ಲೋಝೋಲ್ ಔಷಧಿಯನ್ನು 6 ಗ್ರಾಂ ಪ್ರತಿ 10