Best Viewed in Mozilla Firefox, Google Chrome

 ಭತ್ತದ ಕೀಟಪೀಡೆಗಳ ಸಮಗ್ರ ನಿರ್ವಹಣೆ
ಭತ್ತ ಕರ್ನಾಟಕ ರಾಜ್ಯದ ಬಹು ಮುಖ್ಯ ಆಹಾರ ಬೆಳೆ.  ರಾಜ್ಯದಲ್ಲಿ ಸುಮಾರು 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ  ಬೆಳೆಯಲಾಗುತ್ತಿದೆ.  ಭತ್ತಕ್ಕೆ ಕರ್ನಾಟಕದಾದ್ಯಂತ 24 ಹೆಚ್ಚು ಕೀಟಗಳು ಕಂಡುಬಂದರೂ, ಕೆಲವೇ ಕೀಟಗಳು ಪ್ರಮುಖ ಪೀಡೆಗಳಾಗಿವೆ. ಈ ಬೆಳೆಗೆ ಬಿತ್ತನೆ ಮಾಡಿದಾಗಿನಿಂದ ಹಿಡಿದು ಕಟಾವಾಗುವವರೆಗೂ ಒಂದಲ್ಲ ಒಂದು ರೀತಿಯ ಕೀಟ ಬಾದೆ ಇದ್ದೆ ಇರುತ್ತದೆ. ಕೀಟಗಳ ಭಾದೆ ಸಸಿ ಮಡಿಯಲ್ಲಿರಬಹುದು. ತೆಂಡೆಯೊಡೆಯುವ ಸಮಯದಲ್ಲಿರಬಹುದು ಅಥವಾ ಕಾಳು ಕಟ್ಟುವ ಸಮಯದಲ್ಲಿರಬಹುದು. ಆದ್ದರಿಂದ  ಈ ಕೀಟಗಳ  ಹಾವಳಿಯನ್ನು ಅರಿತು ಸಮರ್ಪಕ ಹತೋಟಿ ಕ್ರಮಗಳನ್ನು  ತೆಗೆದುಕೊಳ್ಳುವುದು ಅತ್ಯವಶ್ಯ.

ಭತ್ತದ ಕೀಟಗಳನ್ನು ಬೆಳೆಯನ್ನು ಬಾಧಿಸುವ ಹಂತದ ಆನುಗುಣವಾಗಿ ಮುಖ್ಯವಾಗಿ ಮೂರು ಗುಂಪುಗಳಾಗಿ ವಿಂಗಡಿಸಬಹುದು

1. ಸಸಿ ಮಡಿಯಲ್ಲಿ ಬರುವ ಕೀಟಗಳು : ಥ್ರಿಪ್ಸ್ ನುಸಿ, ಗರಿಜಿಗಿ ಹುಳು ಹಾಗೂ ಹಳದಿ ಕಾಂಡ ಕೊರಕ.
2. ಸಸ್ಯ ಬೆಳವಣಿಗೆ / ತೆಂಡೆಯೊಡೆಯುವ ಹ0ತದಿ0ದ ಕ

ಪ್ಯೂಪಾದ ಪರಾವಲಂಬಿಗಳು - Pupal parasitoid

ಸೀನು ಮತ್ತು ಇತರರು (2007) ಮಾಡಿದ ವರದಿಯ ಪ್ರಕೀರನ ಪರಿಸರದಲ್ಲಿ ಬೆಳೆಯುವ ಇಕ್ನ್ಯುಮೋನಿಡ್ ದುಂಬಿ (ಲಿಟೋಚಿಲಾ ನಸ್ ಗೆ ಸೇರುವ) ಯ ಆರಂದ ಹಂತಗಳು ಕೇಸ್ ಹುಳದ ಪರಾವಲಂಬಿಯಾಗಿ ಬಹಳ ಉಪಯುಕ್ತವಾಗಿದೆ. ಮೊಟ್ಟೆಯೊಡೆಯುವ ಹಾಗೂ ಪರಾವಲಂಬಿತನದ ಕುರಿತು ಕ್ಷೇತ್ರ ಹಾಗೂ ಸಂಶೋಧನಾಲಯಗಳ ಸಹಯದಿಂದ ಕೂಲಂಕುಶವಾಗಿ ಅಧ್ಯಯನ ಮಾಡಲಾಯಿತು. ಪ್ರಬುದ್ಧ ಹೆಣ್ಣು ದುಂಬಿಯು ನೀರಿಗೆ ನೆಗೆದು (ಡೈವ್ ಮಾಡಿ) ಆಥಿತೇಯ ಪ್ಯೂಪೆಯನ್ನು ಹುಡುಕಾಡುತ್ತದೆ. ಇದಕ್ಕಾಗಿ ಅದು ನೀರಿನೊಳಗೆ ಸುಮಾರು ಗರಿಷ್ಠ 90.2 ಸೆಕೆಂಡು ಉಳಿದುಕೊಳ್ಳುತ್ತದೆ. ಕ್ಷೇತ್ರ ಹಾಗೂ ಸಂಶೋಧನಾಲಯಗಳ ಪ್ರಯೋಗಗಳಲ್ಲಿ ಶೇ. 73 ಪರಾವಲಂಬಿಗಳ ಧಾಳಿಗೊಳಗಾದ ಪಿ. ಸ್ಟಗ್ನಾಲಿಸ್ ನ ನೀರಿನಡಿಯಲ್ಲಿ ಇರಿಸಿದ ಪ್ಯೂಪೆಗಳು ಪ್ರಬುದ್ಧ ದುಂಬಿಗಳನ್ನು ಹೊರಹಾಕಿದವು. ಆದರೆ, ಒಣ ಸ್ಥತಿಯಲ್ಲಿ ಇರಿಸಿದ, ಪರವಾಲಂಬಿಗಳನ್ನು ಹೊತ್ತ ಪ್ಯೂಪೆಗಳು ಯಾವುವೂ ಪ್ರಬದ್ದ ದುಂಬಿಗಳನ್ನು ಹೊರಹಾಕಲಿಲ್ಲ.

ಪರಾವಲಂಬಿ ಲಾರ್ವಾಗಳು - Larval parasitoids

ಅಪಾಂಟೆಲಿಸ್ ಶೂನೋಯ್(Apanteles schoenoii), ಸ್ಟೆನೋ ಬ್ರೆಕಾನ್ ನೈಸೆವಿಲ್ಲೆಯ್(Stenobracon nicevillei), ಟ್ರೊಫೊಬ್ರಕಾನ್ ಇಂಡಿಕಸ್(Trophobracon indicus ) ಹಾಗೂ ಎಲಾಸ್ಮಸ್ ಝೆಂಟ್ನೆರಿ (Elasmus zehntnerii) ಎನ್ನುವ ನಾಲ್ಕು ಪರಾವಲಂಬಿ ಲಾರ್ವಾಗಳು ಕಾಂಡ ಕೊರಕದ ಮೇಲೆ ಅವಲಂಬಿತವಾಗಿವೆ ಆದರೆ ಹೆಚ್ಚು ಪ್ರಮುಖವಾಗಿಲ್ಲ. ಡಿಪ್ಟೆರನ್ ಪರಾವಲಂಬಿಗಳ ಶೇಕಡವಾರು ಪರಾವಲಂಬಿತನದಲ್ಲಿ 4.00 ರಿಂ ದ 15, ಹಾಗೆಯೇ, ಎಲೆ ಜಿಗಿಹುಳಗಳ ಪ್ಯೂಪದ (pupa) ಗಳ ಮೇಲೆ 5 ರಿಂದ 15% ದಷ್ಟು ಕ್ಸಾಂತೋ ಪಿಂಪ್ಲಾ (Xanthopimpla sp.) ಪ್ರಬೇಧಗಳು ಮನೆಮಾಡಿಕೊಂಡಿದ್ದವು. ಭತ್ತದ ಹಳದಿ ಕಾಂಡ ಕೊರಕದ ಮೇಲಿನ ಪರಾವಲಂಬಿ ಮೊಟ್ಟೆಗಳ ಅಧ್ಯಯನ ನಡೆಸಲಾಯಿತು (ಗುಬ್ಬಯ್ಯ ಮತ್ತು ಇತರರು 1987ಎ). ಟೆಟ್ರಾಸ್ಟೈಕಸ್ ಶುನೋಬಿಯಯ್ (Tetrastichus schoenobii) ಹಾಗೂ ಟೆಲಿನೋಮಸ್ ಡಿಗ್ನಸ್ಪ್ (Telenomus dingus) ಗಳು ಚಟುವಟಿಕೆಯುಕ್ತವಾಗಿದ್ದು, ಮೇಯಿಂದ ನ್ ವರೆಗ ಹಾಗೂ ಡಿಸೆಂಬರದಲ್ಲಿ 68 ರಿಂದ 100% ಮೊಟ್ಟೆಗಳನ್ನು ಅವಲಂಬಿಸಿದ್ದವು, ಅದೇ ಟೆಲಿನೋಮಸ್ ಡಿಗ್ನಸ್ (Telenomus dingus) ಗಳು ಜೂನ್ ತಿಂಗಳಲ್ಲಿ ಹೆಚ್ಚಾಗಿ ಕಂಡುಬಂದವು. ಟ

ಕರ್ನಾಟಕದಲ್ಲಿ ಪರಾವಲಂಬಿ ಮೊಟ್ಟೆಗಳು - Egg parasitoids in Karnataka

ಮೂರು ಪರಾವಲಂಬಿ ಮೊಟ್ಟೆಗಳನ್ನು ಭತ್ತದ ಕಾಂಡ ಕೊರಕದ ಮೇಲೆ ಗುರುತಿಸಲಾಗಿದೆ. ಅವುಗಳ ಜೀವಶಾಸ್ತ್ರ, ಕಾಲದಲ್ಲಿ ಅವುಗಳ ಸಂಖ್ಯೆಯಲ್ಲಿ ಆಗುವ ಬದಲಾವಣೆಗಳು, ಹಾಗೂ ಸ್ಥಿತಿಗತಿಯನ್ನು ಸಹ ಅಧ್ಯಯನ ಮಾಡಲಾಯಿತು. ಟೆಟ್ರಾಸ್ಟಿಕಸ್ ಶುನಬಿಯೈ(Tetrastichus schoenobii), ಟೆಲೆನೋಮಸ್ ಬೆನಿಫೀಶಿಯೆನ್ಸ್ (Telenomus beneficiens ) ಹಾಗೂ ಟ್ರೈಕೋಗ್ರಾಮಾ (Trichogramma sp. ) ಪ್ರಬೇಧದ ಒಟ್ಟು ಪರಾವಲಂಬಿ ಘಟನೆಗಳು ವಿವಿಧ ತಿಂಗಳುಗಳಲ್ಲಿ 59.4 ರಂದ 93.3% ಇದ್ದವು. (ಉಸ್ಮಾನ್ ಹಾಗ ಇತರರು. 1964). ಟ್ರೈಕಗ್ರಾಮಾ ಪ್ರಬೇಧವನ್ನು ದೊಡ್ಡ ಸಂಖ್ಯೆಯಲ್ಲಿ ಬೆಳೆಸಿ ಅವುಗಳನ್ನು ಬಿಡಗಡೆ ಮಾಡುವ ಪ್ರಯತ್ನಗಳನ್ನು ಮಾಡಲಾಗಿದೆ.

ಭತ್ತದ ಪರಿಸರ ಪದ್ಧತಿಯಲ್ಲಿ ನೈಸರ್ಗಿಕ ಶತ್ರುಗಳು - Natural enemies in rice ecosystem of Karnataka

1. ಭತ್ತದ ಪರಿಸರ ಪದ್ಧತಿಯಲ್ಲಿ ನೈಸರ್ಗಿಕ ಶತ್ರುಗಳು ಕೀಟಗಳ ಸಂಖ್ಯೆಯನ್ನು ಇಟಿಎಲ್ ಮಟ್ಟದಿಂದ ಕೆಳಗಿರುವಂತೆ ನೋಡಿಕೊಳ್ಳುತ್ತವೆ. ಜೇಡ ಮತ್ತು ಮಿರಿಡ್ ಕೀಟ/ಹೇನುಗಳು ಇವೇ ಮೊದಲಾದ ಕೆಲವು ಪ್ರಮುಖ ಬೇಟೆಗಾರ ಕೀಟಗಳು, ಬೆಳೆ ಬೆಳೆಯುವ ಸಮಯದಲ್ಲಿ ಚಟುವಟಿಕೆಯಿಂದ ಕೂಡಿರುತ್ತವೆ(ಮಂಜುನಾಥ್ ಮತ್ತು ಇತರರು.1978).

2. ಕರ್ನಾಟಕದ 13 ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 15 ಕುಟುಂಬಕ್ಕೆ ಸೇರಿದ 45 ಜೆನೆರದ ಜೇಡ ವನ್ನು ಗುರುತಿಸಲಾಯಿತು(ಅನ್ಸಾರಿ ಮತ್ತು ಪವಾರ್, 1992) . ತುಂಗಭದ್ರಾ ದ ನದೀ ಪಾತ್ರದಲ್ಲಿ 8 ಕುಟುಂಬದ, 14 ಜೆನೆರಾ ಗೆ ಸೇರಿದ 7 ಪ್ರಬೇಧಗಳನ್ನು ವರದಿ ಮಾಡಲಾಗಿದೆ (ವಿಜಯಕುಮಾರ್ ಮತ್ತು ಪಾಟೀಲ್, 2006). ಭತ್ತದಗದ್ದೆಗಳ ಪರಿಸರ ಪರಿಸ್ಥಿತಿಯಲ್ಲಿ ಜೇಡನ ಸಂಖ್ಯೆಯನ್ನು ನಿರಂತರವಾಗಿ ಸಮೀಕ್ಷೆ ಮಾಡಿದಾಗ ಮೂರು ಕಾಲಗಳಲ್ಲಿ ಅವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು (ಶೃಂಗದಲ್ಲಿರುವುದು) ಕಂಡುಬಂತು: ಎಪ್ರಿಲ್- ಮೇ, ಜುಲಾಯಿ ಮತ್ತು ಸೆಪ್ಟೆಂ

ಕರ್ನಾಟಕದಲ್ಲಿ ಗಾಲ್ ಮಿಡ್ಜ್ ಪ್ರತಿರೋಧದ ಗುಣವಿರುವ ಕಲ್ಟಿವಾರ್ ಗಳು - Gall midge resistant cultivars in Karnataka

1. ಐಇಟಿ 12179, ಐಇಟಿ 12351, ಐಇಟಿ 12797, ಐಇಟಿ 12811, ಐಆರ್ 36, ಅಭಯ ಸುರಕ್ಷಾ, ಮತ್ತು ಶಕ್ತಿ (ಸೆಟ್ಟಿ ಮತ್ತು ಇತರರು,1991, 1993,1994, 1994ಎ,), ಐಇಟಿ 7956 (ಪರಮೇಶ್ವರ ಮತ್ತು ಇತರರು 1995), ಎಂ.ಟಿಯು 20, ಹಲುಗ, ಗಂಧಸಾಲೆ ಮತ್ತು ಗುಲ್ವಾಡಿ ಸಣ್ಣ (ಮಲ್ಲೇಶಪ್ಪ ಮತ್ತು ಕುಮಾರಸ್ವಾಮಿ, 1998)ಇವುಗಳನ್ನು ಗಾಲ್ ಮಿಡ್ಜ್ ಗ ಪ್ರತಿರೋಧಕತೆಯಿರವ ಕಲ್ಟಿವಾರ್ ಗಳೆಂದು ಗುರುತಿಸಲಾಗಿದೆ.

2. ಶಕ್ತಿ, ಫಲ್ಗುಣ, ಮಹಾವೀರ ಹಾಗೂ ನೇತ್ರಾವತಿ ತಳಿಗಳನ್ನು ಗಾಲ್ ಮಿಡ್ಜ್ ಗೆ ಪ್ರತಿರೋಧಕತೆಯಿರುವುದರಿಂದ ಅವುಗಳನ್ನು ಸೀಮಿತ ವಿತರಣೆಯಿರುವ ನಿರ್ದಿಷ್ಠ (endemic areas) ಪ್ರದೇಶಗಳಿಗೆ ಶಿಫಾರಸು ಮಾಡಲಾಗಿದೆ (ನಾಯ್ಡು ಮತ್ತ ಇತರರು. 1978, 1979; ವಿದ್ಯಾಚಂದರ ಮತ್ತು ಇತರರು. 1981).

ಕರ್ನಾಟಕದಲ್ಲಿ ಬಿಪಿಹೆಚ್ ಪ್ರತಿರೋಧಕ ತಳಿಗಳು - BPH resistant varieties in Karnataka

ಐಇಟಿ 7575 (ಗುಬ್ಬಯ್ಯ ಮತ್ತು ವಿದ್ಯಾಚಂದ್ರ, 1985) ಹಾಗೂ ಐಇಟಿ 8116 (ಗುಬ್ಬಯ್ಯ ಮತ್ತು ಇತರರು, 1990 ) ಗಳನ್ನು ವಲಯ 6 ರಲ್ಲಿ ಬಿಪಿ ಹೆಚ್ ಅನ್ನು ಸಹಿಸುವ ತಳಿಗಳೆಂದು ಮತ್ತು ಎಂಟಿ ಯು -2077, ಐಇಟಿ -8110 ಮತ್ತು ಎಂ. ಟಿ ಯು -2070ಗಳನ್ನು ತುಂಗಭದ್ರಾ ಯೋಜನಾ ಪ್ರದೇಶದಲ್ಲಿ ಬಿಪಿಹೆಚ್ ಪ್ರತಿರೋಧಕ ತಳಿಗಳೆಂದು ಬಿಡುಗಡೆ ಮಾಡಲಾಯಿತು (ದ್ರೋಣಾವಳಿ, 2005).

ಭತ್ತದ ಕಲ್ಟಿವಾರ್ ಗಳಾದ ಐಇಟಿ 7575 ಐಇಟಿ 8116 , ಐಇಟಿ -8110 ,ಐಇಟಿ 9912, ಐಇಟಿ 9873 ಮತ್ತು ಬಿಪಿಟಿ 2217 ಗಳನ್ನು ಬಿಪಿಹೆಚ್ ಪ್ರತಿರೋಧಕತೆಯಿರುವ ತಳಿಗಳೆಂದು ಗರುತಿಸಲಾಗಿದೆ (ಗುಬ್ಬಯ್ಯ ಮತ್ತು ರೇವಣ್ಣ, 1992 ಶಿವಮೂರ್ತಪ್ಪ, 1993).

ಕರ್ನಾಟಕದ ಪ್ರತಿರೋಧಕ ತಳಿಗಳು - Resistance varieties in Karnataka

ಅಖಿಲ ಭಾರತೀಯ ಸಂಯೋಜಿತ ಭತ್ತದ ಸುಧಾರಣಾ ಕಾರ್ಯಕ್ರಮ (All India Coordinated Rice Improvement Programme) ದ ಮುಖ್ಯ ಉದ್ದೇಶವೇ ಕೀಟ ಪ್ರತಿರೋಧಕ ಗುಣಗಳಿರುವ ಭತ್ತದ ತಳಿಯ ಅಭಿವೃದ್ಧಿ. ಹಲವು ಕಲ್ಟಿವಾರ್ ಗಳನ್ನು ಹಳದಿ ಕಾಂಡ ಕೊರಕ, ಗಾಲ್ ಮಿಡ್ಜ್, ಹಾಗೂ ಭತ್ತದ ಕಂದು ಮಿಡತೆಗಳ (ಜಿಗಿ ಹುಳ) ವಿರುದ್ಧ ಪ್ರತಿರೊಧಕ ಗುಣಗಳಿಗಾಗಿ ಪರೀಕ್ಷೆ ಮಾಡಲಾಯಿತು. ಇಪ್ಪತ್ತೆರಡು ವರ್ಷಗಳ ಅವಧಿಯಲ್ಲಿ (1996-2009), 14,190 germplasm accessions under ಮಿಡತೆಗಳ ಪರೀಕ್ಷೆ (PHS) ಯಡಿಯಲ್ಲಿ, ರಾಷ್ಟ್ರೀಯ ಸಸ್ಯ ಕ್ಷೇತ್ರ ಪರೀಕ್ಷೆ{National screening nursery(NSN1)} ಮತ್ತು ಪ್ರಮುಖ ಕೀಟಗಳ ಜರ್ಮ ಪ್ಲಾಸ್ಮ ಮೌಲ್ಯಮಾಪನ {Germplasm evaluation against major pests(GEMP) } ದಿಂದ ಪ್ರಮುಖವಾದ ವಿವಿಧ ಕೀಟಗಳನ್ನು ಮತ್ತು 386 ದಾನಿಗಳನ್ನು ಪರೀಕ್ಷೆಗೆಒಳಪಡಿಸಿ ಅವುಗಳು ಬೇರೆ ಬೇರೆ ಕೀಟಗಳಿಗೆ ಒಡ್ಡುವ ಪ್ರತಿರೋಧ ಪ್ರಮಾಣವನ್ನು ಗುರುತಿಸಲಾಯಿತು ಸಿದ್ದೇಗೌಡ, 2009; ಸಿದ್ದೇ ಗೌಡ ಮತ್ತು ಗುಬ್ಬಯ್ಯ, 2009). ಪ್ರಮುಖ ವಿವಿಧ ಕೀಟಗಳ ಮತ್ತು 386 ದಾನಿಗಳನ್ನು ಅವುಗಳ ಬೇರೆ ಬೇರೆ ಕೀಟಗಳಿಗೆ ಒಡ್ಡುವ ಪ್ರತಿ

ಮಂಡ್ಯದಲ್ಲಿ ಸಮಗ್ರ ಪೌಷ್ಠಿಕಾಂಶ ನಿರ್ವಹಣಾ (ಐ ಪಿ ಎಂ) ಆಚರಣೆಗಳು - IPM practices at Mandya

ಈ ಮೊದಲು ಹಲವಾರು ಯಾಂತ್ರಿಕ ಮತ್ತು ಸಾಂಸ್ಕೃತಿಕ ವಿಧಾನಗಳು ಭತ್ತದ ಕೀಟಗಳ ನಿಯಂತ್ರಣಕ್ಕೆ ಶಿಫಾರಸು ಮಾಡಲಾಗಿತ್ತು. ಭತ್ತದ ಕಾಂಡ ಕೊರಕ ಕೀಟಗಳ ಹಾವಳಿಯನ್ನು ಕಡಿಮೆ ಮಾಡಲು, ಮತ್ತು ತ್ರಿಪ್ಸ್ ಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಾಟಿ ಮಾಡುವ ಸಮಯದಲ್ಲಿ ಸಸಿಗಳ ಎಲೆಯ ತುದಿಗಳನ್ನು ತರಿಯುವುದು, ಸರ್ವೇಸಾಮಾನ್ಯವಾಗಿತ್ತು. ಭತ್ತದ ಬೆಳೆಯ ನಿಂತ ನೀರಿಗೆ ಸೀಮೆ ಎಣ್ಣೆಯನ್ನು ಸಿಂಪಡಿಸುವುದು, ಹಾಗೂ ಸ್ಥಳೀಯವಾಗಿ ಲಭ್ಯವಿರುವ ಸಾಧನಗಳಿಂದ ಹಂತಗಳ ಕೀಟಗಳನ್ನು ಸಸಿಯಿಂದ ಕಳಚಿಬಿಡುವುದು, ಕೇಸ್ ಹುಳ ಹಾಗೂ ನೀಲಿ ಬೀಟಲ್ ಗಳ ನ್ನು ತಡೆಯುವ ವಿಧಾನವಾಗಿ ಶಿಫಾರಸು ಮಾಡಲಾಗಿತ್ತು (ಉಸ್ಮಾನ್, 1946). ಪುಟ್ಟರುದ್ರಯ್ಯ ಮತ್ತು ಅಪ್ಪಣ್ಣ (1957)ಭತ್ತದ ಕಾಂಡ ಕೊರಕವನ್ನು ಸೆರಹಿಡಿಯಲು, ಸೆರೆ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡರು ಆದರೆ ಅದರ ಪರಿಣಾಮ ಉತ್ತೇಜಕವಾಗಿರಲಿಲ್ಲ. ಭತ್ತದ ಕೀಟತಜ್ಞರ ಸಹಾಯದಿಂದ ಮಂಡ್ಯದಲ್ಲಿ 2007 ರಲ್ಲಿ ಹಳದಿ ಕಾಂಡ ಕೊರಕವನ್ನ

Copy rights | Disclaimer | RKMP Policies